

ಮೊಹಾಲಿ: ಇದೇ ತಿಂಗಳು ನಡೆಯಲಿರುವ ಬಾಂಗ್ಲಾದೇಶ, ಆಫ್ಘಾನಿಸ್ತಾನ ತಂಡಗಳನ್ನೊಳಗೊಂಡ ಕಿರಿಯರ ತ್ರಿಕೋನ ಕ್ರಿಕೆಟ್ ಸರಣಿಗಾಗಿ 19 ವರ್ಷದೊಳಗಿನವರ ಭಾರತ ತಂಡದ ಸಂಭಾವ್ಯರ ಪಟ್ಟಿ ಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ.
ಟೂರ್ನಿಯು ನ. ೨೦ರಿಂದ ೩೦ವರೆಗೆ ಕೋಲ್ಕತಾದಲ್ಲಿ ನಡೆಯಲಿದೆ. ಪಟ್ಟಿಯಲ್ಲಿ, ರಿಕಿ ಭುಯ್, ಹಿಮಾಂಶು ರಾಣಾ, ರಿಷಬ್ ಪಾಂಟ್, ಇಶಾಂತ್ ಕಿಶನ್, ವಾಷಿಂಗ್ಟನ್ ಸುಂದರ್, ಸ್ವರಾಜ್ ಖಾನ್, ಅಮನ್ ದೀಪ್ ಖಾರೆ, ವಿರಾಟ್ ಸಿಂಗ್, ಮಹಿಪಾಲ್ ಲೊಮ್ರೊರ್, ಮಯಾಂಕ್ ದಾಗರ್, ಪ್ರದೀಪ್ ಪ್ರಮಾಣಿಕ್, ಶುಭಂ ನಾಯಕ್, ಜಾಶಾನ್ ಅನ್ಸಾರಿ, ಖಲೀಲ್ ಅಹ್ಮದ್, ಕನಿಷ್ಕ್, ಆವೇಶ್, ರಾಹುಲ್, ಸಯ್ಯದ್, ಶುಭಂ ಮಾವಿ ಇದ್ದಾರೆ.