

ಲಾಹೋರ್: ಮಹಿಳೆಯೊಬ್ಬರ ಜತೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್‌ಗೆ ಪಿಸಿಬಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕಳೆದ ವಾರ ಪಾಕ್‌ನ ಹೈದರಾಬಾದ್‌ನಲ್ಲಿ ಪ್ರಥಮ ದರ್ಜೆ ಕ್ರಿಕಟ್ ಪಂದ್ಯದ ವೇಳೆ ಮಹಿಳೆ ಜತೆ ಕ್ರೀಡಾಂಗಣದಲ್ಲೇ ಅನುಚಿತ ವರ್ತನೆ ತೋರಿದ್ದಾರೆ ಎನ್ನುವ ದೂರು ದಾಖಲಾಗಿತ್ತು. ಈ ಆರೋಪ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದು. ಇಂಗ್ಲೆಂಡ್ ವಿರುದ್ಧದ ಮೂರು ಟಿ20 ಕ್ರಿಕೆಟ್ ಪಂದ್ಯಗಳಿಂದ ಅವರನ್ನು ಕೈಬಿಡಲಾಗಿದೆ.
ಅಶಿಸ್ತಿನ ಹಿನ್ನೆಲೆಯಲ್ಲಿ ಉಮರ್ ಶಿಕ್ಷೆಗೆ ಗುರಿಯಾಗಿದ್ದರು. 2015 ವಿಶ್ವಕಪ್ ಟೂರ್ನಿಯನ್ನು ವಾಕರ್ ಯೂನಿಸ್ ಜತೆ ಜಗಳ ಮಾಡಿರುವ ಕಾರಣಕ್ಕೆ ಕಳೆದುಕೊಂಡಿದ್ದರು. ಕಳೆದ ವರ್ಷ ಪಾಕ್‌ನಲ್ಲಿ ಟ್ರಾಫಿಕ್ ನಿಯಮಗಳನ್ನು ಮುರಿದು ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿ, ಜೈಲು ಶಿಕ್ಷೆಗೂ ಗುರಿಯಾಗಿದ್ದರು.