ಇಂಡೋ-ಪಾಕ್ ಕ್ರಿಕೆಟ್ ಶೀಘ್ರ ನಿರ್ಧಾರ: ಬಿಸಿಸಿಐ

ಬಹುಚರ್ಚಿತ ಇಂಡೋ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಈ ವರ್ಷಾಂತ್ಯದಲ್ಲಿ ನಡೆಯುತ್ತಿದೆಯೋ ಇಲ್ಲವೋ...
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)
Updated on: 

ಮುಂಬೈ: ಬಹುಚರ್ಚಿತ ಇಂಡೋ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಈ   ವರ್ಷಾಂತ್ಯದಲ್ಲಿ ನಡೆಯುತ್ತಿದೆಯೋ ಇಲ್ಲವೋ ಎಂಬ ಕೌತುಕಕ್ಕೆ ಇಷ್ಟರಲ್ಲೇ ತೆರೆಬೀಳಲಿದೆ  ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಸ್ಪಷ್ಟಪಡಿಸಿದೆ.

``ಎಲ್ಲರೂ ಸಾಂಪ್ರದಾಯಿಕ ದಾಯಾದಿಗಳ ಆಟವನ್ನು ಕಣ್ತುಂಬಿಕೊಳ್ಳಬೇಕೆಂಬ ಧಾವಂತದಲ್ಲಿದ್ದು, ಇನ್ನೊಂದೆರಡು ದಿನಗಳಲ್ಲಿ ಈ ಸರಣಿಯ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ'' ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.``ಬಿಸಿಸಿಐ ಆಹ್ವಾನವನ್ನು ಮನ್ನಿಸಿ ಪಾಕಿಸ್ತಾನ ತಂಡ ಯಾವುದೇ ಕಾರಣಕ್ಕೂ  ಭಾರತ ಪ್ರವಾಸ  ಕೈಗೊಳ್ಳುವುದಿಲ್ಲ. ಉಭಯರ ನಡುವಿನ ಒಪ್ಪಂದದಂತೆ ಈಗ ಪ್ರವಾಸ  ಕೈಗೊಳ್ಳಬೇಕಾದ ಸರದಿ ಭಾರತದ್ದಾಗಿದ್ದು, ಸರಣಿ ಆಡುವುದೇ ಆದಲ್ಲಿ ಅದು ಯುಎಇನಲ್ಲಿ ಮಾತ್ರವೇ'' ಎಂದು ಪಾಕ್ ಸರ್ಕಾರ ಘೋಷಿಸಿದ ಬೆನ್ನಿಗೇ  ಇಂಥದ್ದೊಂದು ಮಾತು ಹೊರಬಿದ್ದಿರುವುದು ಮುಂದಿನ ತಿಂಗಳು ಸರಣಿ ನಡೆಯುವ ಸಂಭಾವ್ಯತೆಯನ್ನು ಸೃಷ್ಟಿಸಿದೆ.

``ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ಆಯೋಜಿಸುವುದು ಐಸಿಸಿ ಮತ್ತು ಎಸಿಸಿಗೆ ಬಿಟ್ಟ ವಿಚಾರ.ಯಾವ ತಂಡ ಯಾವ ಸ್ಥಳಕ್ಕೆ ಹೋಗಬೇಕೆಂದು ನಿರ್ಧರಿಸುವುದು ಕೂಡ ಅವುಗಳೇ. ಆದರೆ, ದ್ವಿಪಕ್ಷೀಯ, ಸರಣಿಯನ್ನು ನಿರ್ಧರಿಸುವುದು ಆಯಾ ರಾಷ್ಟ್ರಗಳಿಗೆ ಮತ್ತು ಅವುಗಳಿಗೆ ಸೂಕ್ತ ಹಾಗೂ ಹಿತಕರವೆನ್ನುವ ಕಡೆ ನಡೆಸಬಹುದಾಗಿದೆ. ಒಟ್ಟಾರೆ  ಭಾರತ ಮತ್ತು ಪಾಕಿಸ್ತಾನ ನಡುವಣದ ಸರಣಿಯ ಕುರಿತು ಶೀಘ್ರದಲ್ಲೇ ನಿರ್ಧಾರ  ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com