ಭಾರತ ತಂಡದ ಪರ ಟಿ20 ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಕರ್ನಾಟಕದ ಎಡಗೈ ವೇಗಿ ಶ್ರೀನಾಥ್ ಅರವಿಂದ್ 4 ಓವರ್‍ಗಳಲ್ಲಿ 44 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಅಶ್ವಿನ್ ಸಹ 1 ವಿಕೆಟ್ ಪಡೆದರು. ವ್ಯರ್ಥವಾದ ರೋಹಿತ್ ಶತಕ ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮುವ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಆರಂಭಿಕರಾದ ರೋಹಿತ್ ಶರ್ಮಾ (106 ರನ್, 66 ಎಸೆತ, 12 ಬೌಂಡರಿ, 5 ಸಿಕ್ಸರ್) ದಕ್ಷಿಣ ಆಫ್ರಿಕಾ ಬೌಲರ್‍ಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದರು. ಎರಡನೇ ವಿಕೆಟ್‍ಗೆ ರೋಹಿತ್ ಹಾಗೂ ವಿರಾಟ್ ಕೊಹ್ಲಿ (43 ರನ್, 27 ಎಸೆತ, 1 ಬೌಂಡರಿ, 3 ಸಿಕ್ಸರ್) ತಂಡಕ್ಕೆ 138 ರನ್‍ಗಳ ಅಮೋಘ ಜತೆಯಾಟ ನೀಡಿದರು. ಈ ಇಬ್ಬರು ವಿಕೆಟ್ ಬಿದ್ದ ನಂತರ ಭಾರತ ತಂಡದ ರನ್ ವೇಗ ಕಡಿಮೆಯಾಯಿತು. ಇನಿಂಗ್ಸ್‍ನ ಕೊನೆಯ ಓವರ್‍ಗಳಲ್ಲಿ ಮತ್ತೊಮ್ಮೆ ಭಾರತದ ಬ್ಯಾಟ್ಸ್‍ಮನ್‍ಗಳು ತರಗೆಲೆಗಳಂತೆ ಉರುಳಿದ್ದು, 200ರ ಗಡಿ ದಾಟುವ ಭಾರತದ ಅವಕಾಶ ಸಂಪೂರ್ಣವಾಗಿ ಕೈಜಾರಿತು. ಹರಿಣಗಳ ಪರ ಕೈಲ್ ಅಬೊಟ್ 2 ವಿಕೆಟ್ ಪಡೆದರೆ, ಮೋರಿಸ್ 1 ವಿಕೆಟ್ ಪಡೆದರು.