ಭಾರತ ಪ್ರವಾಸಕ್ಕೆ ಹರಿಣಗಳ ಪಡೆ ಪ್ರಕಟ

ಮುಂದಿನ ತಿಂಗಳು ಆರಂಭಗೊಳ್ಳಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಆತಿಥೇಯ ಭಾರತ ತಂಡಗಳ ನಡುವಿನ ಗಾಂಧಿ ಮಂಡೇಲಾ ಕ್ರಿಕೆಟ್ ಸರಣಿಗಾಗಿ ಹರಿಣಗಳ ಮೂರು ತಂಡಗಳನ್ನು ಹೆಸರಿಸಲಾಗಿದೆ.
ದಕ್ಷಿಣ ಆಫ್ರಿಕಾ ತಂಡ (ಸಂಗ್ರಹ ಚಿತ್ರ)
ದಕ್ಷಿಣ ಆಫ್ರಿಕಾ ತಂಡ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಆತಿಥೇಯ ಭಾರತ ತಂಡಗಳ ನಡುವಿನ ಗಾಂಧಿ ಮಂಡೇಲಾ ಕ್ರಿಕೆಟ್ ಸರಣಿಗಾಗಿ ಹರಿಣಗಳ ಮೂರು ತಂಡಗಳನ್ನು ಹೆಸರಿಸಲಾಗಿದೆ.

ಟೆಸ್ಟ್ ತಂಡಕ್ಕೆ ಹಷೀಂ ಆಮ್ಲಾ ನಾಯಕರಾಗಿದ್ದರೆ, ಏಕದಿನ ತಂಡಕ್ಕೆ ಎಬಿ ಡಿವಿಲಿಯರ್ಸ್ ಹಾಗೂ ಟಿ20 ತಂಡಕ್ಕೆ ಡು ಪ್ಲೆಸಿಸ್ ನಾಯಕತ್ವವಿದೆ. ಟೆಸ್ಟ್ ತಂಡದಲ್ಲಿ ಮೂವರು ಸ್ಪಿನ್ನರ್  ಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಟೆಸ್ಟ್ ತಂಡಕ್ಕೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಕೈಗೊಂಡಿದ್ದ ಬಾಂಗ್ಲಾದೇಶ ಸರಣಿಯಿಂದ ಹೊರಗುಳಿದಿದ್ದ ಇಮ್ರಾನ್ ತಾಹಿರ್ ಹಾಗೂ  ಡೇನ್ ಪೀಟ್ ಅವರ ಪುನರಾಗಮನವಾಗಿದೆ. ಇವರೊಂದಿಗೆ ಸೈಮನ್ ಹ್ಯಾಮರ್ ತಂಡದಲ್ಲಿ ಮೂರನೇ ಸ್ಪಿನ್ನರ್ ಆಗಿ ತಂಡಕ್ಕೆ ಆಗಮಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದಿದ್ದ ಎಬಿ ಡಿವಿಲಿಯರ್ಸ್, ಫಿಟ್ ಆದಲ್ಲಿ ಬೆಂಗಳೂರಿನಲ್ಲಿ 100ನೇ ಟೆಸ್ಟ್ ಆಡುವುದು ಖಚಿತವಾಗಲಿದೆ.

ಟೆಸ್ಟ್ ತಂಡ: ಹಾಶೀಂ ಆಮ್ಲಾ (ನಾಯಕ), ಎಬಿ ಡಿವಿಲಿಯರ್ಸ್, ಟೆಂಬಾ ಬವುಮಾ, ಜೆಪಿ ಡುಮಿನಿ, ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗಾರ್, ಸೈಮನ್ ಹಾರ್ಮರ್, ಇಮ್ರಾನ್ ತಾಹಿರ್,  ಮೊರ್ನೆ ಮಾರ್ಕೆಲ್, ವರ್ನೊನ್ ಫಿಲೆಂಡರ್, ಡೇನ್ ಪೀಟ್, ಕಗಿಸೊರಬಡಾ, ರಿಲೀ ರೊಸ್ಸೌ, ಡೇಲ್ ಸ್ಟೇಯ್ನ್. ಏಕದಿನ: ಎಬಿ ಡಿವಿಲಿಯರ್ಸ್ (ನಾಯಕ), ಕೈಲ್ ಅಬ್ಬೊಟ್, ಹಾಶೀಂ ಆಮ್ಲಾ, ಫಾರ್ಹಾನ್ ಬೆಹರ್ದಿನ್, ಕ್ವಿಂಟಾನ್ ಡಿ ಕಾಕ್, ಜೆಪಿ ಡುಮಿನಿ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಡೇವಿಡ್ ಮಿಲ್ಲರ್, ಮೊರ್ನೆ ಮಾರ್ಕೆಲ್, ಕ್ರಿಸ್ ಮೊರಿಸ್, ಆರೋನ್ ಫಾಂಗಿಯೋ, ಕಸಿಗೊ ರಬಡಾ, ರಿಲೀ ರೊಸ್ಸೌ, ಡೇಲ್ ಸ್ಟೇನ್.

ಟಿ20: ಫಾಫ್ ಡು ಪ್ಲೆಸಿಸ್ (ನಾಯಕ), ಕೈಲ್ ಅಬ್ಬೊಟ್, ಹಷೀಂ ಆಮ್ಲಾ, ಫಾರ್ಹಾನ್ ಬೆಹರ್ದಿನ್, ಕ್ವಿಂಟಾನ್ ಡಿ ಕಾಕ್, ಮರ್ಚಂಟ್ ಡಿ ಲಾಂಗೆ, ಎಬಿ ಡಿವಿಲಿಯರ್ಸ್, ಜೆಪಿ ಡುಮಿನಿ,  ಇಮ್ರಾನ್ ತಾಹಿರ್, ಎಡ್ಡಿ ಲೀ, ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಕಾಗಿಸೊ ರಬಾಡಾ, ಡೇವಿಡ್ ವೈಸ್, ಖಾಯಾ ಝೊಂಡೊ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com