ಇಂದು ಟೀಂ ಇಂಡಿಯಾ ಆಯ್ಕೆ

ಮುಂದಿನ ತಿಂಗಳು ಅಕ್ಟೋಬರ್ 2ರಿಂದ ಶುರುವಾಗಲಿರುವ ದ.ಆಫ್ರಿಕಾ ವಿರುದ್ಧದ ಚುಟುಕು ಹಾಗೂ ಏಕದಿನ ಪಂದ್ಯ ಸರಣಿಗಾಗಿ ಭಾರತ ತಂಡವನ್ನು ಭಾನುವಾರ ಆಯ್ಕೆ ಮಾಡಲಾಗುತ್ತಿದೆ...
ಟೀಂ ಇಂಡಿಯಾ
ಟೀಂ ಇಂಡಿಯಾ
Updated on: 
ಬೆಂಗಳೂರು: ಮುಂದಿನ ತಿಂಗಳು ಅಕ್ಟೋಬರ್ 2ರಿಂದ ಶುರುವಾಗಲಿರುವ ದ.ಆಫ್ರಿಕಾ ವಿರುದ್ಧದ ಚುಟುಕು ಹಾಗೂ ಏಕದಿನ ಪಂದ್ಯ ಸರಣಿಗಾಗಿ ಭಾರತ ತಂಡವನ್ನು ಭಾನುವಾರ ಆಯ್ಕೆ ಮಾಡಲಾಗುತ್ತಿದೆ. 
ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದ್ದು, ಬಹುತೇಕ 3 ಟಿ-20 ಹಾಗೂ ಮೊದಲ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಆರಿಸುವ ಸಂಭವವಿದೆ. 
ಕೇವಲ ಐದು ತಿಂಗಳು ಮಾತ್ರ ಬಾಕಿ ಉಳಿದಿರುವ ಐಸಿಸಿ ವಿಶ್ವ ಟಿ-20 ಪಂದ್ಯಾವಳಿಯ ಆತಿಥ್ಯ ಹೊತ್ತಿರುವ ಭಾರತ, ಅದಕ್ಕಾಗಿ ಪೂರ್ಣ ಪ್ರಮಾಣದ ಸಶಕ್ತ ಟೀಂ ಇಂಡಿಯಾವನ್ನು ಸಜ್ಜುಗೊಳಿಸುವುದು ಆಯ್ಕೆ ಸಮಿತಿಯ ಮೊದಲ ಆದ್ಯತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com