

ಗುವಾಹಟಿ: ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ಮುಂದುವರೆಸಿದ್ದು, ಭಾರತ ಚಿನ್ನದ ಬೇಟೆ ಭರ್ಜರಿಯಾಗಿ ಸಾಗಿದೆ.
ಮಹಿಳೆಯರ ಜಾವೆಲಿನ್ ಥ್ರೋನಲ್ಲಿ ಸುಮನ್ ದೇವಿ, ಪುರುಷರ ಟ್ರಿಪಲ್ ಜಂಪ್ ನಲ್ಲಿ ರೆಂಜಿತ್ ಮಹೇಶ್ವರಿ, ಶಾಟ್ ಪುಟ್ ನಲ್ಲಿ ಓಂ ಪ್ರಕಾಶ್ ಕರ್ಹಾನ್, ಮಹಿಳೆಯರ 1,500 ಮೀಟರ್ ವಿಭಾಗದಲ್ಲಿ ಪಿ.ಯು ಚಿತ್ರಾ, ಅಂತೆಯೇ ಪುರುಷರ 1,500 ಮೀಟರ್ ಓಟದಲ್ಲಿ ಅಜೋಯ್ ಕುಮಾರ್ ಸರೋಜ್, ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿ ಜಾವುನಾ ಮುರ್ಮು ಮತ್ತು ಪುರುಷರ 400 ಮೀಟರ್ ಹರ್ಡಲ್ಸ್ ನಲ್ಲಿ ಧರುಣ್ ಅಯ್ಯಾಸಾಮಿ ಚಿನ್ನದ ಪದಕ ಜಯಿಸಿದರು.
ಅಂಕಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, 140 ಚಿನ್ನ, 78 ಬೆಳ್ಳಿ, 20 ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು 238 ಪದಕಗಳನ್ನು ಗಳಿಸಿದೆ.