ಮೊದಲ ಟೆಸ್ಟ್: ಆಸಿಸ್ ಗೆ ಶರಣಾದ ಕಿವೀಸ್

ವೆಲ್ಲಿಂಗ್ಟನ್ ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಚ್ ಪಂದ್ಯದಲ್ಲಿ ಪ್ರವಾಸಿ ಆಸಿಸ್ ತಂಡ ಇನ್ನಿಂಗ್ಸ್ ಮತ್ತು 52 ರನ್ ಗಳ ಭರ್ಜರಿ ಜಯ ಸಾಧಿಸಿದೆ...
ಗೆಲುವಿನ ಸಂಭ್ರಮದಲ್ಲಿ ಆಸಿಸ್ ಬಳಗ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಗೆಲುವಿನ ಸಂಭ್ರಮದಲ್ಲಿ ಆಸಿಸ್ ಬಳಗ (ಚಿತ್ರಕೃಪೆ: ಕ್ರಿಕ್ ಇನ್ಫೋ)
Updated on: 

ವೆಲ್ಲಿಂಗ್ಟನ್: ವೆಲ್ಲಿಂಗ್ಟನ್ ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಚ್ ಪಂದ್ಯದಲ್ಲಿ ಪ್ರವಾಸಿ ಆಸಿಸ್ ತಂಡ ಇನ್ನಿಂಗ್ಸ್ ಮತ್ತು 52 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ನಿರ್ಧಾಕ್ಕೆ ಬಂದ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 183 ರನ್ ಗಳಿಗೆ ಕಟ್ಟಿಹಾಕಿತು. ಗ್ರೇಗ್ (ಅಜೇಯ 41 ರನ್) ಮತ್ತು ಆ್ಯಂಡರಸೆನ್ (38 ರನ್) ಅವರನ್ನು ಹೊರತು ಪಡಿಸಿದರೆ ಕಿವೀಸ್ ಇನ್ನಾವುದು ಆಟಗಾರನೂ ಕೂಡ ಆಸಿಸ್ ವಿರುದ್ಧ ಪ್ರತಿ ಹೋರಾಟ ತೋರುವ ಆಟ ಪ್ರದರ್ಶಿಸಲಿಲ್ಲ.

ಬಳಿಕ ಬ್ಯಾಟಿಂಗ್ ಮಾಡಿದ ಆಸ್ಟ್ರೇಸಿಯಾ ಆಡ೦ ವೋಗ್ಸ್ (239ರನ್) ಆಕಷ೯ಕ ದ್ವಿಶತಕ ಮತ್ತು ಖವಾಜಾ ಅವರ ಆಕರ್ಷಕ ಶತಕದದ ನೆರವಿನಿ೦ದ ಬರೊಬ್ಬರಿ 562 ರನ್ ದಾಖಲಿಸಿತು. ನಾಲ್ಕನೇ ದಿನದಾಟಂದ ಅಂತ್ಯಕ್ಕೆ 4 ವಿಕೆಟ್‍ಗೆ 178ರನ್ ಗಳಿಸಿದ್ದ ಕಿವೀಸ್ ಪಡೆ  201ರನ್‍ಗಳ ಹಿನ್ನಡೆಯಲ್ಲಿತ್ತು. ಇಂದು 327 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಮೊದಲ ಟೆಸ್ಟ್ ನಲ್ಲಿ ಸೋಲೊಪ್ಪಿಕೊಂಡಿತು.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್: 183 ಮತ್ತು ದ್ವಿತೀಯ ಇನ್ನಿಂಗ್ಸ್ 329
ಆಸ್ಟ್ರೇಲಿಯಾ: ಪ್ರಥಮ ಇನಿ೦ಗ್ಸ್ 562

ಫಲಿತಾಂಶ: ಆಸ್ಟ್ಪೇಲಿಯಾಗೆ ಇನ್ನಿಂಗ್ಸ್ ಮತ್ತು 52 ರನ್ ಗಳ ಜಯ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com