

ಮುಂಬೈ: ನಾಯಕ ಎಂಎಸ್ ಧೋನಿ ತವರಿನಲ್ಲಿ ನಡೆದ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ದ್ವಿತೀಯ ಟಿ20 ಪಂದ್ಯ ಕಳೆದ ಐದು ವರ್ಷಗಳಲ್ಲೇ ಅತೀ ಹೆಚ್ಚು ವೀಕ್ಷಣೆಗೊಳಗಾದ ದಾಖಲೆ ಬರೆದಿದೆ.
ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎರಡನೇ ಪಂದ್ಯ ಫೆಬ್ರವರಿ 12ರಂದು ಧೋನಿ ತವರಾದ ರಾಂಚಿಯಲ್ಲಿ ನಡೆಯಿತು. ಈ ಪಂದ್ಯದ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನ ಟೆಲಿವಿಷನ್ ವಿವರ್ ಶೀಪ್ ಇನ್ ಮಿಲಿಯನ್ಸ್(ಟಿವಿಎಂ) ಪ್ರಕಾರ 256 ರೇಟಿಂಗ್ ಪಡೆದು ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ.
ಪ್ರಸಾರ ಪ್ರೇಕ್ಷಕರು ರಿಸರ್ಚ್ ಕೌನ್ಸಿಲ್(ಬಿಎಆರ್ಸಿ) ಅಂಕಿಅಂಶಗಳ ಪ್ರಕಾರ 2012ರ ಡಿಸೆಂಬರ್ 25ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯ 112 ರೇಟಿಂಗ್ ಪಡೆದ ಮೊದಲ ಸ್ಥಾನದಲ್ಲಿತ್ತು.
ಈ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯಾವಳಿಗೆ ಅದ್ಭುತ ಆರಂಭ ಸಿಕ್ಕಿದ್ದು, ಫೆಬ್ರವರಿ 24-ರಿಂದ ಆರಂಭಗೊಳ್ಳುವ ಏಷ್ಯಾಕಪ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಭಾರತದಲ್ಲಿ ಆಯೋಜಿಸಿರುವ ಟಿ20 ವಿಶ್ವಕಪ್ ಮೇಲೆ ಹೆಚ್ಚು ಪ್ರಭಾವ ಬೀರಲಿದೆ.
ಈ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ 69 ರನ್ ಗಳನ್ನು ಗಳಿಸಿದ್ದರು.