

ಕೇಪ್ ಟೌನ್: ದೀಪಿಕಾ ಗಳಿಸಿದ ಪೆನಾಲ್ಟಿ ಕಾರ್ನರ್ ಗೋಲ್ ನ ಸಹಾಯದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲವು ಸಾಧಿಸಿದೆ.
ತೀವ್ರ ಕುತೂಹಲಕಾರಿಯಾಗಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಗೆಲವಿಗಾಗಿ ಪರಿಶ್ರಮಪಟ್ಟವು. ಒಂದು ತಂಡದ ತಂತ್ರಗಾರಿಕೆಯನ್ನು ಮತ್ತೊಂದು ತಂಡ ವಿಫಲಗೊಳಿಸುವುದು ಸಾಮಾನ್ಯವಾಗಿತ್ತು.
ಇತ್ತ ಎರಡು ತಂಡಗಳು ಈ ಸಮಬಲದ ಹೋರಾಟದಿಂದಾಗಿ ಪಂದ್ಯದ ಮೊದಲಾರ್ಥ ಹಾಗೂ ದ್ವಿತೀಯಾರ್ಧದ ಮೊದಲ ಕ್ವಾರ್ಟರ್ ಅವಧಿಯಲ್ಲಿ ಗೋಲು ದಾಖಲಾಗಲಿಲ್ಲ. ಆದರೆ, ಅಂತಿಮ ಕ್ವಾರ್ಟರ್ ನಲ್ಲಿ ಗೋಲು ಗಳಿಸಿದ ಭಾರತ ಜಯದ ನಗೆ ಬೀರಿತು.