

ಪರ್ತ್: ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ನಡುವಣದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ 9 ರನ್ ಗಳಿಸಿ ಔಟಾಗಿದ್ದಾರೆ. ಭಾರತ 12 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ.
ಎಂ.ಎಸ್. ಧೋನಿ ನಾಯಕತ್ವದ ಭಾರತ ತಂಡಕ್ಕೆ ಮೊದಲ ಸತ್ವಪರೀಕ್ಷೆ ಎದುರಾಗಿದೆ. ಇದೇ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಐಸಿಸಿ ವಿಶ್ವ ಟಿ20 ಪಂದ್ಯಾವಳಿಗೆ ಆತಿಥ್ಯ ಹೊತ್ತಿರುವ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಈ ಐದು ಏಕದಿನ ಹಾಗೂ ಮೂರು ಟಿ20 ಪಂದ್ಯ ಸರಣಿಯು ಮಹತ್ವವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ (ವಾಕಾ) ಮೈದಾನದಲ್ಲಿ ನಡೆಯಲಿರುವ ಪಂದ್ಯವು ಭಾರತದ ಸಾಮಥ್ರ್ಯವನ್ನು ಒರೆಗೆ ಹಚ್ಚಲಿದೆ. ಇದೇ ಮೈದಾನದಲ್ಲಿ ನಡೆದ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಒಂದು ಚುಟುಕು ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 74 ಮತ್ತು 64 ರನ್‍ಗಳ ಭರ್ಜರಿ ಗೆಲುವು ಸಾಧಿಸಿದ ಧೋನಿ ಪಡೆಯ ಸಾಮಥ್ರ್ಯವು ನಿಜಾರ್ಥದಲ್ಲಿ ಈ ಸರಣಿಯೊಂದಿಗೆ ಆರಂಭವಾಗಲಿದೆ. ಇನ್ನು ಐದು ಏಕದಿನ ಪಂದ್ಯ ಸರಣಿಯ ನಂತರ ನಡೆಯಲಿರುವ ಮೂರು ಚುಟುಕು ಪಂದ್ಯ ಸರಣಿಯೂ ಉಭಯರ ಪಾಲಿಗೆ ಮಹತ್ವವೆನಿಸಿದೆ.
2007ರ ಚೊಚ್ಚಲ ವಿಶ್ವ ಟಿ20 ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ಚಾಂಪಿಯನ್ ಆಗಿದ್ದು, ತವರಿನಲ್ಲಿ ಟ್ರೋಫಿ ಗೆಲ್ಲಬೇಕಾದ ಒತ್ತಡದಿಂದಾಗಿ ಅದರ ಪಾಲಿಗೆ ಈ ಟೂರ್ನಿ ಪ್ರತಿಷ್ಠೆಯದ್ದಾಗಿದ್ದರೆ, ಒಮ್ಮೆಯೂ ಚುಟುಕು ಟ್ರೋಫಿ ಗೆಲ್ಲದ ಆಸ್ಟ್ರೇಲಿಯಾಗೆ ಹೊಸ ಸವಾಲು ಎದುರಾಗಲಿದೆ.
ಧೋನಿಗೆ ಅಗ್ನಿಪರೀಕ್ಷೆ: ಅಂದಹಾಗೆ ಆಸ್ಟ್ರೇಲಿಯಾ ವಿರುದ್ಧ ಈ ಸರಣಿಯು ಭಾರತ ತಂಡದ ನಾಯಕ ಎಂ.ಎಸ್. ಧೋನಿಗಂತೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮುಂದಿನ ವಿಶ್ವ ಟಿ20 ಪಂದ್ಯಾವಳಿಯವರೆಗೆ ಧೋನಿಯೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಹೇಳಿದ್ದರೂ, ದ.ಆಫ್ರಿಕಾ ವಿರುದ್ಧ ಏಕದಿನ ಹಾಗೂ ಚುಟುಕು ಸರಣಿಯಲ್ಲಿ ಸೋಲನುಭಸಿ ವ್ಯಾಪಕ ಟೀಕೆಗೆ ಗುರಿಯಾದ ಧೋನಿ, ಕಾಂಗರೂಗಳ ವಿರುದ್ಧ ಸರಣಿಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಆತ್ಮವಿಶ್ವಾಸದಲ್ಲಿ ಪಾಂಡೆ: ಚುಟುಕು ಅಭ್ಯಾಸ ಪಂದ್ಯದಲ್ಲಿ ಶಿಖರ್ ಧವನ್, ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸಿದರೂ, ಏಕದಿನ ಪಂದ್ಯದಲ್ಲಿ ಮಾತ್ರ ನಿರಾಸೆ ಅನುಭವಿಸಿದ್ದರು. ಆದರೆ, ಕನ್ನಡಿಗ ಮನೀಶ್ ಪಾಂಡೆ ಏಕದಿನ ಪಂದ್ಯದಲ್ಲಿ ಗಳಿಸಿದ ಅರ್ಧಶತಕ ಭರವಸೆ ಮೂಡಿಸಿದೆ. ಇನ್ನು ಬೌಲಿಂಗ್‍ನಲ್ಲಿ ಬೈರೀಂದರ್ ಸ್ರನ್ ಆಶಾಕಿರಣವಾಗಿ ಹೊಮ್ಮಿದ್ದರೆ, ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ವೇಗಿ ಉಮೇಶ್ ಯಾದವ್ ಕೂಡ ಕಾಂಗರೂಗಳ ವಿರುದಟಛಿ ಪರಿಣಾಮಕಾರಿ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ. ಏತನ್ಮಧ್ಯೆ ಆಲ್ ರೌಂಡರ್ ರವೀಂದ್ರ ಜಡೇಜಾ ದ.ಆಫ್ರಿಕಾ ವಿರುದಟಛಿ ಟೆಸ್ಟ್ ಸರಣಿಯಲ್ಲಿ ತೋರಿದ ಅದೇ ಪ್ರಚಂಡ ಪ್ರದರ್ಶನವನ್ನು ಮುಂದುವರೆಸುವ ತವಕದಲ್ಲಿದ್ದಾರೆ.
ಭಾರತ ತಂಡ
ಎಂ.ಎಸ್. ಧೋನಿ(ನಾಯಕ) ಶಿಖರ್ ಧವನ್, ರೋಹಿತ್ ಶರ್ಮಾ, ಮನೀಶ್ ಪಾಂಡೆ, ಗುರುಕೀರತ್ ಸಿಂಗ್. ರಿಶಿ ಧವನ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಬ್ರೈಂದರ್ ಸ್ರನ್, ಉಮೇಶ್ ಯಾದವ್.
ಆಸ್ಟ್ರೇಲಿಯಾ
ಸ್ಟೀವನ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಜಾರ್ಜ್ ಬೇಲಿ, ಸ್ಕಾಟ್ ಬೊಲಾಂಡ್, ಜೇಮ್ಸ್ ಫಾಕ್ನರ್, ಏರಾನ್ ಫಿಂಚ್, ಜೋಶ್ ಹಾಜ್ಲೆವುಡ್, ಮಿಚೆಲ್ ಮಾರ್ಶ್, ಶಾನ್ ಮಾರ್ಶ್, ಗ್ಲೆನ್ ಮ್ಯಾಕ್ಸೆವೆಲ್, ಜೊಯೆಲ್ ಪ್ಯಾರಿಸ್ ಮತ್ತು ಕೇನ್ ರಿಚರ್ಡ್‍ಸನ್.