ಟಿ20 ವಿಶ್ವಕಪ್‍ಗೆ ಆಶೀಶ್ ನೆಹ್ರಾ ಸೂಕ್ತ ತಯಾರಿ

ಆಶೀಶ್ ನೆಹ್ರಾ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿ ಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ.
ಟಿ20 ವಿಶ್ವಕಪ್‍ಗೆ ಆಶೀಶ್ ನೆಹ್ರಾ ಸೂಕ್ತ ತಯಾರಿ
Updated on

ನವದೆಹಲಿ: ಐದು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿ ರಾಷ್ಟ್ರೀಯ ತಂಡಕ್ಕೆ ಮರಳಿರುವ ಎಡಗೈ ವೇಗಿ ಆಶೀಶ್ ನೆಹ್ರಾ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. 2011ರ ವಿಶ್ವಕಪ್‍ನ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಪಂದ್ಯವೇ ನೆಹ್ರಾಗೆ ಕೊನೆಯದಾಗಿತ್ತು.

ಈ ಬಗ್ಗೆ ಮಾತನಾಡಿರುವ ನೆಹ್ರಾ 'ಕಳೆದ 23 ವರ್ಷದಲ್ಲಿ ನನ್ನನ್ನು ಆಯ್ಕೆ ಮಾಡದಿದ್ದಾಗ ನಿಜವಾಗಿಯೂ ಅಚ್ಚರಿಯಾಗಿತ್ತು. ಈಗಲಾದರೂ ನನಗೆ ಅವಕಾಶ ಸಿಕ್ಕಿದೆ. ಇದನ್ನು ಬಳಸಿಕೊಳ್ಳಲು ಕಠಿಣ ಪರಿಶ್ರಮ ಹಾಕುತ್ತಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಆಗ ಜನರೇ ಈತನಿಗೆ ಈ ಮುನ್ನವೇ ಅವಕಾಶ ನೀಡಬೇಕಿತ್ತು ಎನ್ನುತ್ತಾರೆ'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com