ಆಸ್ಟ್ರೇಲಿಯಾಕ್ಕೆ 296 ರನ್ ಗಳ ಟಾರ್ಗೆಟ್, ಕೊಹ್ಲಿ ಶತಕ

ಆಸ್ಟ್ರೇಲಿಯಾ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 295 ರನ್ ಗಳನ್ನು ಗಳಿಸಿದ್ದು, ಆಸ್ಟ್ರೇಲಿಯಾಗೆ 296 ರನ್ ಗಳ ಗುರಿ ನೀಡಿದೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 295 ರನ್ ಗಳನ್ನು ಗಳಿಸಿದ್ದು, ಆಸ್ಟ್ರೇಲಿಯಾಗೆ 296 ರನ್ ಗಳ ಗುರಿ ನೀಡಿದೆ.

ಮೊಲ್ಬೋರ್ನ್ ನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕವಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದು, ಈ ಬಾರಿ 6 ರನ್ ಗಳಿಗೆ ಔಟ್ ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು. ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಧವನ್ ಈ ಪಂದ್ಯದಲ್ಲಿ 68 ರನ್ ಗಳಿಸಿ ಮಿಂಚಿದರು. ಧವನ್ ಔಟಾದ ನಂತರ ಕೊಹ್ಲಿ ಜತೆಗೂಡಿ ಅಜಿಂಕ್ಯ ರಹಾನೆ (50) ಅರ್ಧ ಶತಕ ಗಳಿಸಿದರು. ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆ ನಿಂತ ವಿರಾಟ್ ಕೊಹ್ಲಿ (117) ಆಕರ್ಷಕ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು.

ಆಸ್ಟ್ರೇಲಿಯಾ ಪರ ಹಸ್ಟೀಂಗ್ಸ್ 4, ಫಾಕ್ಲನರ್ ಹಾಗೂ ರಿಚರ್ಡ್ ಸನ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com