ಏಷ್ಯಾ ಕಪ್ ಹಾಕಿ: ಜಪಾನ್ ನ್ನು ಮಣಿಸಿದ ಭಾರತ ವನಿತೆಯರು ಫೈನಲ್ ಗೆ ಲಗ್ಗೆ

ಭಾರತ ಮಹಿಳೆಯರ ಹಾಕಿ ತಂಡಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಜಪಾನ್ ಅನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಏಷ್ಯಾ ಕಪ್ ಹಾಕಿ: ಜಪಾನ್ ನ್ನು ಮಣಿಸಿದ ಭಾರತ ವನಿತೆಯರು ಫೈನಲ್ ಗೆ ಲಗ್ಗೆ
ಏಷ್ಯಾ ಕಪ್ ಹಾಕಿ: ಜಪಾನ್ ನ್ನು ಮಣಿಸಿದ ಭಾರತ ವನಿತೆಯರು ಫೈನಲ್ ಗೆ ಲಗ್ಗೆ
ಕಾಕಮಿಗಾರ: ಭಾರತ ಮಹಿಳೆಯರ ಹಾಕಿ ತಂಡಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಜಪಾನ್ ಅನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‌ ಪಂದ್ಯದಲ್ಲಿ 4–2 ಗೋಲುಗಳಲ್ಲಿ ಜಪಾನ್‌ ತಂಡಕ್ಕೆ ಸೋಲುಣಿಸಿ ಭಾರತ ತಂಡ ಫೈನಲ್ ಪ್ರವೇಶಿಸಿದೆ.
ಭಾರತ ಪರವಾಗಿ ಗುರ್ಜಿತ್ ಕೌರ್‌ (7, 9ನೇ ನಿ.) ಎರಡು, ನವಜ್ಯೋತ್ ಕೌರ್ (9ನೇ ನಿ.), ಲಾಲ್‌ರೆಮ್‌ಸಿಯಾಮಿ (38ನೇ ನಿ.) ತಲಾ ಒಂದು ಗೋಲು ಗಳನ್ನು ಗಳಿಸಿ ಭಾರತವನ್ನು ಸರಣಿಯ ಅಂತಿಮ ಘಟ್ಟಕ್ಕೆ ತಲುಪಿಸಿದರು.
ಏಷ್ಯಾ ಕಪ್ ಹಾಕಿಯ ಫೈನಲ್ ಹಣಾಹಣಿ ಭಾನುವಾರ ನಡೆಯಲಿದ್ದು ಭಾರತವು ಚೀನಾವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಚೀನಾವನ್ನು  4–1 ಗೋಲುಗಳಿಂದ ಮಣಿಸಿದ್ದ ಭಾರತೀಯ ವನಿತೆಯರು ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಿಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com