ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಮೇರಿ ಕೋಮ್ ಗೆ ಚಿನ್ನದ ಗರಿ

ಭಾರತದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಎಂ ಸಿ ಮೇರಿ ಕೋಮ್
ಎಂ ಸಿ ಮೇರಿ ಕೋಮ್
Updated on
ಹೋ ಚಿ ಮೆನ್ ಸಿಟಿ: ಭಾರತದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಉತ್ತರ ಕೊರಿಯಾದ ಕಿಮ್ ಹೈಯಾಂಗ್ ಮಿ ವಿರುದ್ಧ ಮೇರಿ ಕೋಮ್ 5-0 ಅಂತರದ ಜಯ ದಾಖಲಿಸಿದರು.
2014 ರ ಏಷ್ಯನ್ ಕ್ರೀಡಾಕೂಟದ ಬಳಿಕದಲ್ಲಿ ಇದು ಮೇರಿ ಕೋಮ್ ಅವರ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಆಗಿದೆ. ಹಾಗೆಯೇ ಈ ವರ್ಷದ ಅವಧಿಯಲ್ಲಿ ಅವರ ಮೊದಲ ಪದಕ ಇದಾಗಿದೆ. .
ನಿನ್ನೆ ನಡೆದ ಪಂದ್ಯದಲ್ಲಿ ಮೇರಿ, ಜಪಾನ್ ನ ಸುಬಾಸಾ ಕೊಮುರಾ ಅವರನ್ನು ಮಣಿಸಿ ಫೈನಲ್ ತಲುಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com