2018 ಕಾಮನ್'ವೆಲ್ತ್ ಕ್ರೀಡಾಕೂಟ: ವೇಯ್ಟ್ ಲಿಫ್ಟಿಂಗ್ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ವಿಕಾಸ್ ಠಾಕೂರ್

2018 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, 94 ಕೆಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ವಿಕಾಸ್ ಠಾಕೂರ್ ಕಂಚಿನ ಪದಕ ಗೆದ್ದಿದ್ದಾರೆ.
ವಿಕಾಸ್ ಠಾಕೂರ್
ವಿಕಾಸ್ ಠಾಕೂರ್
ನವದೆಹಲಿ: 2018 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, 94 ಕೆಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ವಿಕಾಸ್ ಠಾಕೂರ್ ಕಂಚಿನ ಪದಕ ಗೆದ್ದಿದ್ದಾರೆ. 
ವಿಕಾಸ್ ಠಾಕೂರ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಈ ವರೆಗೂ 11 ಪದಕಗಳನ್ನು ಗೆದ್ದಿದೆ.  6 ಚಿನ್ನದ ಪದಕ, 2 ಬೆಳ್ಳಿಯ ಪದಕ, 3 ಕಂಚಿನ ಪದಕಗಳನ್ನು ಭಾರತ ಈ ವರೆಗೂ ಗೆದ್ದಿದೆ. 
ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕೆನಡಾ ಹಾಗೂ ಪಿಎನ್ ಜಿ (ಪಪುವಾ ನ್ಯೂ ಗುನಿಯನ್) ನ ಸ್ಟೀವ್ ಕರಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಸ್ಟೀವ್ ಕರಿ ಚಿನ್ನದ ಪದಕ ಗೆದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com