ಹಾಕಿ ಪುರುಷರ ವಿಶ್ವಕಪ್: ದಕ್ಷಿಣ ಆಫ್ರಿಕಾವನ್ನು 5-2 ಅಂತರದಿಂದ ಮಣಿಸಿದ ಭಾರತ 9 ನೇ ಸ್ಥಾನಕ್ಕೆ

ಹಾಕಿ ಪುರುಷರ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ತಂಡ 5-2 ಅಂತರದಿಂದ ಮಣಿಸಿದೆ.
ಭಾರತ- ದಕ್ಷಿಣ ಆಫ್ರಿಕಾ ಹಾಕಿ ಪಂದ್ಯ
ಭಾರತ- ದಕ್ಷಿಣ ಆಫ್ರಿಕಾ ಹಾಕಿ ಪಂದ್ಯ

ರೂರ್ಕೆಲಾ: ಹಾಕಿ ಪುರುಷರ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ತಂಡ 5-2 ಅಂತರದಿಂದ ಮಣಿಸಿದೆ.

ನಾಯಕ ಹರ್ಮನ್ ಪ್ರೀತ್, ಆಕಾಶದೀಪ್ ಹಾಗೂ ಶಂಶೇರ್ ಸಿಂಗ್ ತಂಡದ ಪರ ಗೋಲು ಗಳಿಸಿ ಮಿಂಚಿದರು. ಈ ಗೆಲುವಿನೊಂದಿಗೆ ಭಾರತ ಅರ್ಜೆಂಟಿನಾದೊಂದಿಗೆ 9 ನೇ ಸ್ಥಾನವನ್ನು ಹಂಚಿಕೊಂಡಿದೆ. ಜ.26 ರಂದು ಭಾರತ ಜಪಾನ್ ವಿರುದ್ಧ ಗೆಲುವು ದಾಖಲಿಸಿತ್ತು
 
ಮೊದಲ ಹಾಗೂ ನಾಲ್ಕನೇ ಕ್ವಾರ್ಟರ್ ನಲ್ಲಿ ಭಾರತ ಎರಡು ಬಾರಿ ಗೋಲು ದಾಖಲಿಸಿತ್ತು. ಜಾಗತಿಕ ಮಟ್ಟದಲ್ಲಿ 6ನೇ ಸ್ಥಾನದಲ್ಲಿರುವ ಭಾರತ 6 ಪೆನಾಲ್ಟಿ ಗೋಲ್ ಅವಕಾಶವನ್ನು ಗಳಿಸಿತ್ತು. ಈ ಪೈಕಿ ಒಂದು ಗೋಲ್ ನ್ನು ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಗಳಿಸಿತು. ಭಾರತ ತಂಡ ಈ ಪಂದ್ಯದಲ್ಲಿ ಆರಂಭದಲ್ಲಿಯೇ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಾಲ್ಕನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com