ವಿಶ್ವ ಚಾಂಪಿಯನ್ಶಿಪ್: ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್!ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಸ್ಪೇನ್ನಲ್ಲಿ ನಡೆದ U23 ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ: ಸಜನ್ ಭನ್ವಾಲಾ ಐತಿಹಾಸಿಕ ಸಾಧನೆವೀಸಾ ನಿರಾಕರಣೆ ವಿವಾದದ ನಡುವೆಯೇ 23 ವರ್ಷದೊಳಗಿನ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತ ಐತಿಹಾಸಿಕ ಪದಕ ಸಾಧನೆ ಮಾಡಿದ್ದು, ಸಜನ್ ಭನ್ವಾಲಾ ಮೂಲಕ ಮೊದಲ ಪದಕ ಪಡೆದಿದೆ.
ರೆಸ್ಲಿಂಗ್ ಫೆಡರೇಶನ್ ಮಾಡಲಾಗದ್ದನ್ನು ವಾರದಲ್ಲಿ ಮಾಡಿಕೊಟ್ಟ ಟ್ರಾವೆಲ್ ಏಜೆಂಟ್, ರಾಯಭಾರ ಕಚೇರಿಯಲ್ಲೇ ಭ್ರಷ್ಟಾಚಾರ!!23 ವರ್ಷದೊಳಗಿನವರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಆಯ್ಕೆಯಾದ 21 ಭಾರತೀಯ ಕುಸ್ತಿಪಟುಗಳ ವೀಸಾ ಅರ್ಜಿಯನ್ನು ಸ್ಪ್ಯಾನಿಷ್ ರಾಯಭಾರ ಕಚೇರಿ ತಿರಸ್ಕರಿಸಿದ್ದರೂ, ಖಾಸಗಿ ಟ್ರಾವೆಲ್ ಏಜೆಂಟ್ ಒಬ್ಬರು ಕೇವಲ ಒಂದೇ ವಾರದಲ್ಲಿ ಮಹಿಳಾ ಗ್ರಾಪ್ಲರ್ಗೆ ಅದನ್ನು ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
U-23 ವಿಶ್ವ ಚಾಂಪಿಯನ್ಶಿಪ್: 21 ಭಾರತೀಯ ಕುಸ್ತಿಪಟುಗಳಿಗೆ ಸಿಕ್ಕಿಲ್ಲ ವೀಸಾ; ವಿಲಕ್ಷಣ ಕಾರಣ ಕೊಟ್ಟ ಸ್ಪೇನ್!ಭಾರತದ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮುಂದೆ ವಿಚಿತ್ರ ಸಮಸ್ಯೆಯೊಂದು ಬಂದಿದೆ. ಸ್ಪೇನ್ನ ಪಾಂಟೆವೆಡ್ರಾದಲ್ಲಿ ನಡೆಯಲಿರುವ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ಶಿಪ್ಗಾಗಿ 21 ಭಾರತೀಯ ಕುಸ್ತಿಪಟುಗಳಿಗೆ ವೀಸಾ ನಿರಾಕರಿಸಲಾಗಿದೆ.
2027 AFC ಏಷ್ಯನ್ ಕಪ್ ಆಯೋಜನೆ: ಭಾರತ, ಸೌದಿ ಅರೇಬಿಯಾ ನಡುವೆ ತೀವ್ರ ಪೈಪೋಟಿ2027 AFC ಏಷ್ಯನ್ ಕಪ್ ಆಯೋಜನೆ ವಿಚಾರದಲ್ಲಿ ಭಾರತ, ಸೌದಿ ಅರೇಬಿಯಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಭಿಮಾನದ ಅತಿರೇಕ: ಆರ್ ಸಿಬಿ ಬಗ್ಗೆ ಅಪಹಾಸ್ಯ ಮಾಡಿದ ಸ್ನೇಹಿತನನ್ನೇ ಕೊಂದ ವಿರಾಟ್ ಕೊಹ್ಲಿ ಫ್ಯಾನ್ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿದ ಕರ್ನಾಟಕ: 88 ಪದಕಗಳು, ನಾಲ್ಕನೇ ಸ್ಥಾನಗುಜರಾತ್ ನಲ್ಲಿ ಮೊನ್ನೆ ಬುಧವಾರ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 88 ಪದಕಗಳು ಲಭಿಸಿದ್ದು, 27 ಚಿನ್ನದ ಪದಕಗಳು,23 ಬೆಳ್ಳಿ ಮತ್ತು 38 ಕಂಚಿನ ಪದಕಗಳು ಬಂದಿವೆ.
30 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಖ್ಯಾತ ಮಹಿಳಾ ರೆಸ್ಲರ್ ಸಾರಾ ಲೀ!ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಫಿಫಾ U-17: ಭಾರತೀಯ ತಂಡವನ್ನು ಮುನ್ನಡೆಸಲಿರುವ ದಿನಗೂಲಿ ಕಾರ್ಮಿಕನ ಮಗಳು2022ರ ಫಿಫಾ U-17 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಫುಟ್ಬಾಲ್ ತಂಡವನ್ನು ದಿನಗೂಲಿ ಕಾರ್ಮಿಕರೊಬ್ಬರ ಮಗಳು ಮುನ್ನಡೆಸಲಿದ್ದಾರೆ.
2022ರ ಫುಟ್ಬಾಲ್ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿ: ಸುಳಿವು ಕೊಟ್ಟ ಲಿಯೋನಲ್ ಮೆಸ್ಸಿ!ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ತಮ್ಮ ಅಭಿಮಾನಿಗಳಿಗೆ ದಿಢೀರ್ ಶಾಕ್ ನೀಡಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.
ಎಎಫ್ಸಿ ಅಂಡರ್-17 ಫುಟ್ಬಾಲ್ ಏಷ್ಯನ್ ಕಪ್ ಅರ್ಹತಾ ಪಂದ್ಯ: ಕುವೈತ್ ವಿರುದ್ಧ ಭಾರತಕ್ಕೆ ಭರ್ಜರಿ ಜಯಎಎಫ್ಸಿ ಅಂಡರ್-17 ಫುಟ್ಬಾಲ್ ಏಷ್ಯನ್ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಕುವೈತ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.
2026 ರ ಕಾಮನ್ ವೆಲ್ತ್ ಗೇಮ್ಸ್ ಪಟ್ಟಿಗೆ ಶೂಟಿಂಗ್ ಇನ್; ಕುಸ್ತಿ, ಬಿಲ್ಲುಗಾರಿಕೆ ಔಟ್ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ 2026 ರಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ)ನ ಪಟ್ಟಿಗೆ ಶೂಟಿಂಗ್ ನ್ನು ಸೇರ್ಪಡೆಗೊಳಿಸಲಾಗಿದ್ದು, ಕುಸ್ತಿಯನ್ನು ಕೈಬಿಡಲಾಗಿದೆ.
ಇಂಡೋನೇಷ್ಯಾ: ಫುಟ್ಬಾಲ್ ಪಂದ್ಯದ ವೇಳೆ ಗಲಭೆ; ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿಕೆಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದೆ.
ಇಂಡೋನೇಷ್ಯಾ: ಪುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ, 127 ಮಂದಿ ದುರ್ಮರಣಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ಪಿಚ್ ಮೇಲೆ ದಾಳಿ ನಡೆಸಿದಾಗ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
National Games 2022: ಭವಾನಿ ದೇವಿಗೆ ಹ್ಯಾಟ್ರಿಕ್ ಚಿನ್ನ, ದಾಖಲೆ ಬರೆದ ದಿನಗೂಲಿ ಕಾರ್ಮಿಕನ ಮಗಳುಟೋಕಿಯೊ ಒಲಿಂಪಿಕ್ ಫೆನ್ಸರ್ ಭವಾನಿ ದೇವಿ ಅವರು ಶುಕ್ರವಾರ ಗುಜರಾತ್ ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆದ ನ್ಯಾಷನಲ್ ಗೇಮ್ಸ್ 2022 ರ ಕ್ರೀಡಾಕೂಟದಲ್ಲಿ ಮಹಿಳೆಯರ ಸೇಬರ್ ಸ್ಪರ್ಧೆಯಲ್ಲಿ ಗೆದ್ದು ದಾಖಲೆಯ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗಳಿಸಿದ್ದಾರೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್