ಮಕರಂದ/ದೋಣಿ

ನ್ಯಾನೋ ಕಥೆಗಳು

Published On :

ವಯಸ್ಸಾದ ಅಪ್ಪ - ಅಮ್ಮನನ್ನು ನೋಡಿಕೊಳ್ಳಲು ಕಷ್ಟವೆಂದು ವೃದ್ಧಾಶ್ರಮಕ್ಕೆ ಸೇರಿಸಿದ ಮಗ. ತನ್ನ ಕಾರಿನಲ್ಲಿ ಮಾತ್ರ ಅವರ ಬಗ್ಗೆ ಪ್ರೀತಿ ತೋರಿ ದೊಡ್ಡದಾಗಿ ಬರೆಯಿಸಿದ "ತಂದೆ ತಾಯಿಯ ಆಶೀರ್ವಾದ!!!"
ಆದರ್ಶ ದಂಪತಿ ಸ್ಪರ್ಧೆಯಲ್ಲಿ ವಿಜೇತರಾದ ದಂಪತಿಗಳು ಬಹುಮಾನ ಮೊತ್ತದ ಹಂಚಿಕೆ ವಿಷಯದಲ್ಲಿ ಜಗಳವಾಡಿ ಡೈವೋರ್ಸ್ ತೆಗೆದುಕೊಂಡರು!
ಮದ್ಯಪಾನ ವ್ಯಸನ ಮುಕ್ತಿ ಕೇಂದ್ರದಲ್ಲಿ ಜನಗಳಿಗೆ ಕುಡಿತವನ್ನು ಬಿಡಿಸಿದ ಮಹಾನುಭಾವರು, ಅಂದಿನ ಕೆಲಸದೊತ್ತಡ ತಡೆಯದೇ ಎರಡು ಪೆಗ್ ಇಳಿಸಿದರು!
"ನಿಮ್ಮ ತೂಕ ಇಳಿಸಿಕೊಳ್ಳಿ" ಎಂಬ ಜಾಹೀರಾತಿಗೆ ಮರುಳಾದ ದಡೂತಿ ರಾಯರು ಕೊಟ್ಟ ಹಣಕ್ಕೆ ಫಲಿತಾಂಶ ಸಿಗದೇ ಅದೇ ಚಿಂತೆಯಲ್ಲಿ ಸಣ್ಣಗಾದರು!!!

-  ಗಣೇಶ್ ಭಟ್ ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.