

ಒಂದು 'ಎಕೆ- 47' ತಗೊಂಡು ನಾಲ್ಕನ್ನು ಬಲಿಹಾಕಿದರೆ ಯಾರಿಗೂ, ಯಾವುದಕ್ಕೂ ಏನೂ ನಷ್ಟವಾಗೋಲ್ಲ ಅನ್ನೋದು ನನ್ನ ನಂಬಿಕೆ.
ಯಾವುದರ ಬಗ್ಗೆ ಹೇಳ್ತಿದ್ದೀನಿ ಅಂತ ಕೇಳಿದಿರಾ? ಬಂದೆ ಬಂದೆ. ಹೇಳ್ತೀನಿ. ಯಾಕೆ ನಿಧಾನ ಮಾಡ್ತಿದೀನಿ ಅಂದರೆ, ಎಲ್ಲಿ ಜನ ಕೋಪ ಮಾಡಿಕೋತಾರೋ, ಎಲ್ಲಿ ನನ್ನ ಬಗ್ಗೆ ಮಾನನಷ್ಟ ಮೊಕದ್ದಮೆ ಹಾಕ್ತಾರೋ, ಎಲ್ಲಿ ನನ್ನನ್ನ ತಲೆ ಕೆಟ್ಟವನು ಅಂತಾರೋ ಅಥವಾ ಬಾಳ ಠಾಕ್ರೆ ಅಂತಿಮಯಾತ್ರೆಯ ನಿಂದನೆಯ ಕೇಸಿನಂತೆ ನನ್ನನ್ನೂ ಅರೆಸ್ಟ್ ಮಾಡಿ ಜೈಲಿಗೆ ಹಾಕಿಬಿಡ್ತಾರೋ ಅನ್ನೋ ಭಯ ಅಷ್ಟೇ. ಹಾಗಂತ ಮನಸ್ಸಿಗೆ ಬಂದದ್ದನ್ನ, ಅದೂ ಸರಿಯಾಗಿದೆ ಅನ್ನಿಸಿದಾಗ ಹೇಳೋದರಲ್ಲಿ ತಪ್ಪೇನಿದೆ? ಹೇಳೋದ್ ಹೇಳಿಬಿಡ್ತೀನಿ.
ನೋಡಿ, ಇದೂ ಇಂಗ್ಲಿಷ್ ವರ್ಣಮಾಲೆ ಕುರಿತು ಹೇಳ್ತಾ ಇರೋ ವಿಷಯ. ಇದರಲ್ಲಿ ಇಪ್ಪತ್ತಾರು ಅಕ್ಷರಗಳಿವೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. 'ಕನ್ನಡದಲ್ಲಿ ಎಷ್ಟು' ಅಂದರೆ ಒಬ್ಬೊಬ್ಬರು ಒಂದೊಂದು ಹೇಳ್ತಾರೆ ಅನ್ನೋದೂ ಗೊತ್ತಿರೋ ವಿಷಯವೇ! ದಿನೇ ದಿನೇ ಕನ್ನಡ ವರ್ಣಮಾಲೆಯಲ್ಲಿನ ಅಕ್ಷರಗಳ ಸಂಖ್ಯೆ ಕಡಿಮೆಯಾಗ್ತಿರೋದೂ ಗೊತ್ತಿರೋಂಥದ್ದೇ. ಕನ್ನಡದಲ್ಲಿ ಹೀಗೆ ಸಂಖ್ಯೆ ಕಡಿಮೆ ಆಗ್ತಿರೋವಾಗ, ಅದರ ಕುರಿತು ಯಾರೂ ಚಕಾರ ಎತ್ತದಿರುವಾಗ ಇಂಗ್ಲಿಷ್‌ನಲ್ಲಿ ಕಡಿಮೆ ಆದರೆ ಯಾಕೆ ಕೇಳಬೇಕು? ಈ ಪ್ರಶ್ನೆ ಎದ್ದ ತಕ್ಷಣ ನನ್ನ ಧೈರ್ಯ ಇನ್ನಷ್ಟು ಹೆಚ್ಚಾಗಿ ಈ ಕೆಲಸಕ್ಕೆ ಕೈ ಹಾಕ್ತಾ ಇದ್ದೀನಿ.
ಮೊದಲನೆಯದಾಗಿ ಇಂಗ್ಲಿಷ್‌ನ 26 ಅಕ್ಷರಗಳಲ್ಲಿ ಧಾರಾಳವಾಗಿ j, k, q, w ಮತ್ತು¡ ಅಕ್ಷರಗಳನ್ನು ಯಾವ ಮುಲಾಜೂ ಇಲ್ಲದೆ ವರ್ಣಮಾಲೆಯಿಂದ ತೆಗೆದುಹಾಕಿ ಸಂಖ್ಯೆಯನ್ನು 21ಕ್ಕೆ ಇಳಿಸಿಬಿಡಬಹುದು.
ಮೊದಲನೆಯದಾಗಿ, George, Garage, Garbage ಅನ್ನೋ ಕೆಲವು ಪದಗಳನ್ನು ತೆಗೆದುಕೊಳ್ಳೋಣ. ಇಲ್ಲಿ G ಅನ್ನೋ ಅಕ್ಷರವನ್ನ '"d'ಕಾರವಾಗಿಯೂ, ''ಜ'ಕಾರವಾಗಿಯೂ ಬಳಸ್ತೀವಿ. ಹೀಗಿರುವಾಗ Gaguar, jungle, jig, Journal, Justice ಮುಂತಾದ ಪದಗಳನ್ನು ಕ್ರಮವಾಗಿ Gungle, gig, gournal, gustice ಅಂತ ಬರೆದು ಜಾಗ್ವರ್, ಜಂಗಲ್, ಜಿಗ್, ಜರ್ನಲ್, ಜಸ್ಟಿಸ್ ಅಂತ ಓದಬಹುದಲ್ಲವೇ? ಅಂದರೆ, ನಮಗೆ '"J'' ಬೇಕಾಗಿಲ್ಲ ಎಂದಾಯ್ತಲ್ಲವೇ?
ಇನ್ನು ಎರಡನೇ ಅಕ್ಷರ K'ಗೆ ಬರೋಣ. Cat, Credit, Critical, Cot, Cut, Account, Across ಮುಂತಾದ ಅನೇಕ ಪದಗಳಲ್ಲಿ 'C' ಅಕ್ಷರವನ್ನ 'ಕ'ಕಾರವಾಗಿ ಬಳಸ್ತೀವಿ. ಹೀಗಿರುವಾಗ K' ಯಾಕೆ?Kangaroo, keen, kick, kookaburra, kudos ಮುಂತಾದ ಪದಗಳನ್ನು Cangaroo, ceen, cick, cookaburra, cudos ಅಂತ ಬರೆದು ಕ್ಯಾಂಗರೂ, ಕೀನ್, ಕಿಕ್, ಕುಕಬರಾ, ಕ್ಯುಡಾಸ್ ಅಂತ ಯಾಕೆ ಓದಬಾರದು? 'K'ನೇ ಇಲ್ಲದಿದ್ದ ಮೇಲೆ Knack, knee, knowledge, knife, knuckle ಮುಂತಾದ ಪದಗಳಲ್ಲಿನ K'ಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಲೆಕ್ಕಕ್ಕೆ ಸೇರಿಸುವ ತಾಪತ್ರಯವೂ ತಪ್ಪುತ್ತೆ!
'"K' ಪಕ್ಕದಲ್ಲಿ 'V'' ಅನ್ನೋ, "U'' ಅನ್ನೋ ಬಳಸಿಬಿಟ್ಟರೆ Q'ಗೆ ಒಂದು ದೊಡ್ಡ ನಮಸ್ಕಾರ ಹಾಕಿಬಿಡಬಹುದು. ಜನುಮಜನುಮದ ಜೋಡಿಯಂತಿರುವ Q' ಜೊತೆಗಿನ "U' ಅನ್ನು ಅಗಲಿಸಿದ ಪಾಪವೂ ತಟ್ಟುವುದಿಲ್ಲ.
ಕೊನೇ ಅಕ್ಷರ 'V'. ಎಲ್ಲೆಲ್ಲಿ ' "W' (ಇದನ್ನು 'ಡಬಲ್ ವಿ' ಅಂತ ಕರೆಯೋದರ ಬದಲು ಡಬಲ್‌ಯು ಅಂತ ಯಾಕೆ ಕರೀತಾರೋ ನಗಂತೂ ಗೊತ್ತಿಲ್ಲ) ಬರುತ್ತೋ ಅಲ್ಲೆಲ್ಲ 'V ಬಳಸಬಹುದಲ್ಲವೇ? ಉದಾಹರಣೆಗೆ, ಇದರ ಪ್ರತಿಕ್ರಮವೂ ಆಗಬಹುದು. ಆದರೆ 'W'ಗಿಂತ 'V' ಸುಲಭ ಅಲ್ಲವೇ? War, wet, white, wordಗಳನ್ನು var vet, vhite, vordಅಂತ ಬರೀಬಹುದಲ್ಲವೇ?
"X''ಗೆ ಬದಲಾಗಿ "ks'', ಅಲ್ಲಲ್ಲ, "cs'ಅನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಬಳಸಬಹುದು. ಇದಕ್ಕೆ ಉದಾಹರಣೆಗಳೂ ಬೇಡ.
ಯಾವುದೇ ಬದಲಾವಣೆಯನ್ನು ಮೊದಮೊದಲು ಯಾರೂ ಒಪ್ಪೋದಿಲ್ಲ ಅನ್ನೋದನ್ನ ಎಲ್ಲರೂ ಒಪ್ತಾರೆ. ಬಳಸ್ತಾ ಬಳಸ್ತಾ ಅದೇ ಅಭ್ಯಾಸ ಆಗತ್ತೆ. ಎಷ್ಟೋ ವರ್ಷ ಆದ ಮೇಲೆ ಹಿಂತಿರುಗಿ ನೋಡಿದರೆ, ಹೌದೇ ನಾವು ಹೀಗೆಲ್ಲಾ ಇದ್ದೆವೇ ಅಂತ ನಾವೇ ಕೇಳಿಕೊಳ್ಳೋ ಹಾಗಾಗುತ್ತೆ ಅನ್ನೋದೂ ಸತ್ಯ ಅಲ್ಲವೇ?
ಇದು ಅಂಬೆಗಾಲು. ಇನ್ನೂ ಎಷ್ಟೋ ಹೆಜ್ಜೆಗಳನ್ನಿಡಬೇಕಿದೆ. ಏನೇ ಆದರೂ ಬೀchi ಅವರ 'ಇಲ್ಲಿ ಅಪ್ಪಟವಾದ ಇಂಗು ಸಿಗುತ್ತದೆ' ಅನ್ನೋ ಬೋರ್ಡ್‌ಗೆ ಬಂದ ಸ್ಥಿತಿಯಂತೂ ಬರೋಲ್ಲ. ಚಿಂತೆ ಬೇಡ.
ಇಂಗ್ಲಿಷ್ ವರ್ಣಮಾಲೆ ಎಡಿಟ್ ಆಗಿದೆ!
ಇಂಗ್ಲಿಷ್ ವರ್ಣಮಾಲೆಯಲ್ಲಿ 26 ಅಕ್ಷರಗಳು ಯಾಕೆ? ಕನ್ನಡ ವರ್ಣಮಾಲೆಯ ರೀತಿ ಅದನ್ನೂ ಎಡಿಟ್ ಮಾಡಬಹುದಲ್ಲವೇ? ತುಂಬಾ ಶಾರ್ಟ್ ಆ್ಯಂಡ್ ಸ್ವೀಟಾಗಿ ಮಾಡಿದ ಈ ಕತ್ತರಿ ಪ್ರಯೋಗ ಬಹುಶಃ ನಿಮಗೂ ಹಿಡಿಸೀತು...
-ಗೌತಮ