ಹೆಂಡತಿ : ಏನ್ರೀ... ಮದುವೆಗೆ ಮುಂಚೆ ನನ್ನನ್ನು ರಾಣಿ ತರ ನೋಡ್ಕೋತೀನಿ ಅಂತಿದ್ರಲ್ಲಾ...
ಗುಂಡ : ಹೌದು ಕಣೇ... ನನ್ ತಾಯಿ ಆಣೆಗೂ ನಿನ್ನನ್ನು ಮದುವೆ ಆಗ್ತೀನಿ ಎಂದು ಅಂದುಕೊಂಡಿರ್ಲಿಲ್ಲಾ.
=
ಪತ್ರಕರ್ತ : ಸಾರ್... ನಿಮ್ಮ ಹೊಸ ಚಿತ್ರದ ಬಗ್ಗೆ ಜನರ ಒಟ್ಟಾರೆ ಅಭಿಪ್ರಾಯ ಹೇಗಿದೆ?
ನಿರ್ದೇಶಕ : ಕೆಲವರಿಗೆ ಇಷ್ಟವಾಗಿದೆ, ಕೆಲವರಿಗೆ ಇಷ್ಟವಾಗಿಲ್ಲ.
ಪತ್ರಕರ್ತ : ಯಾರಿಗೆ ಇಷ್ಟವಾಗಿಲ್ಲ ಸಾರ್?
ನಿರ್ದೇಶಕ : ನನಗೆ ಇಷ್ಟವಾಗಿತ್ತು, ಆದರೆ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.
=
ಹುಡುಗ : ಎಕ್ಸ್ಕ್ಯೂಸ್ಮೀ, ನೋಡೋಕೆ ನೀವು ನನ್ನ ಹೆಂಡತಿಯ ಹಾಗೆ ಇದ್ದೀರಿ...
ಹುಡುಗಿ : ಹೌದಾ... ನಿಮ್ಮ ಹೆಂಡತಿಯ ಹೆಸರೇನು?
ಹುಡುಗ : ಇನ್ನೂ ನನಗೆ ಮದುವೇನೇ ಆಗಿಲ್ಲ.
=
ಜ್ಯೋತಿಷಿ : ನಿನ್ನ ಲೈಫ್ನಲ್ಲಿ ಐದು ಜನ ಹುಡುಗಿಯರು ಬರಲಿದ್ದಾರೆ...
ಮರಿಗುಂಡ : ಐದು ಜನ ಹುಡುಗಿಯರು ಯಾರಿರಬಹುದು?
ಜ್ಯೋತಿಷಿ : ಮದುವೆಯಾದ ನಂತರ ಹೆಂಡತಿ ಮತ್ತು ನಾಲ್ಕು ಜನ ಹೆಣ್ಣುಮಕ್ಕಳು...