ಮಕರಂದ/ದೋಣಿ

ನ್ಯಾನೋ ಕಥೆಗಳು

ನ್ಯಾನೋ ಕಥೆಗಳು
Published On :

ನಮ್ಮ ಸರಕಾರ ಸಾರಾಯಿ ನಿಷೇಧ ಮಾಡಿದ್ದರಿಂದ ಜನರ ಜೀವನಮಟ್ಟ ಬಹಳಷ್ಟು ಸುಧಾರಿಸಿದೆ. ಹೇಗೆಂದರೆ ಸಾರಾಯಿ ಬದಲಿಗೆ ಜನರು ಬಿಯರ್ ಮತ್ತು ಬ್ರ್ಯಾಂಡಿಗಳನ್ನು ಕುಡಿಯುತ್ತಿದ್ದಾರೆ ಎಂದು ಅಬಕಾರಿ ಸಚಿವರು ಹೆಮ್ಮೆಯಿಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತಿದ್ದರು.

ಮೂಢನಂಬಿಕೆಗಳನ್ನು ತ್ಯಜಿಸಿ ಎಂದು ಬಲು ಜೋರಾಗಿ ಭಾಷಣ ಮಾಡುತ್ತಿದ್ದ ಮಹನೀಯರನ್ನು ನೀವು ಕಾರ್ಯಕ್ರಮಕ್ಕೆ ತಡವಾಗಿ ಬಂದದ್ದು ಯಾಕೆ? ಎಂದು ಒಬ್ಬ ಕೇಳಿದ. ಅದಕ್ಕೆ ಭಾಷಣಕಾರ ನಾನು ಬರುವಾಗ ಬೆಕ್ಕು ಅಡ್ಡ ಬಂತು. ಅದಕ್ಕೇ ಸ್ವಲ್ಪ ತಡವಾಯಿತು ಎಂದು ಸಮಜಾಯಿಷಿ ಹೇಳಿದ.

ಹಸು ಕಳೆದುಕೊಂಡು ಕಂಗಾಲಾಗಿದ್ದ ರೈತ, ಜ್ಯೋತಿಷಿ ಹತ್ತಿರ ಹೋಗಿ ಹಸು ಎಲ್ಲಿ ಹೋಗಿರಬಹುದೆಂದು ಕೇಳಿದ. ಜ್ಯೋತಿಷಿ ಎಲ್ಲವನ್ನೂ ವಿಚಾರಿಸಿ ಕೊನೆಗೆ ಒಂದು ತಾಯಿತವನ್ನು ರೈತನಿಗೆ ಕೊಟ್ಟು ಇದನ್ನು ಹಸುವಿನ ಕೊರಳಲ್ಲಿ ಕಟ್ಟು. ಅದು ಎಲ್ಲಿದ್ದರೂ ನಿನ್ನ ಮನೆಗೆ ಬರುತ್ತದೆ ಎಂದ!

ಹೊಸಮನೆ ಕಟ್ಟಿಸಿದ ದಂಪತಿ ಮನೆಯಲ್ಲಿ ನೆಮ್ಮದಿಯಿಲ್ಲದೆ ಒದ್ದಾಡುತ್ತಿದ್ದರು. ವಾಸ್ತು ದೋಷ ಇರಬೇಕೆಂದು ವಾಸ್ತುತಜ್ಞರ ಹತ್ತಿರ ಹೋಗಿ ಸಮಸ್ಯೆಯನ್ನು ಹೇಳಿಕೊಂಡರು. ವಾಸ್ತು ತಜ್ಞರು ಮನೆಯಲ್ಲೆಲ್ಲಾ ಪರಿಶೀಲಿಸಿ, ನೀವಿಬ್ಬರೂ ಈ ಮನೆಯಲ್ಲಿ ಒಟ್ಟಿಗೆ ಸಂಸಾರ ಮಾಡುವ ಹಾಗಿಲ್ಲ. ವಾಸ್ತುವಿನ ಪ್ರಕಾರ ನೀವಿಬ್ಬರೂ ಬೇರೆ ಬೇರೆ ಮನೆಯಲ್ಲಿ ಸಂಸಾರ ಮಾಡಬೇಕೆಂದು ಸಲಹೆ ನೀಡಿದರು.

= ಪ್ರೊ. ಜಿ.ವಿ. ಕೋರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.