ಮಕರಂದ/ದೋಣಿ

ನಗಬೇಕಮ್ಮಾ ನಗಬೇಕು

Published On :

ದಂತ ವೈದ್ಯ: ಪ್ರಾಣಿಗಳಿಗೆ ಹಲ್ಲು ನೋವಿನ ಸಮಸ್ಯೆ ಇರೋದಿಲ್ಲ. ಅದೇನಿದ್ದರೂ ಮನುಷ್ಯರಿಗೆ ಮಾತ್ರ.
ರೋಗಿ: ನಿಜಾ ಸಾರ್? ನಿಮಗೆ ಹೆಂಗೆ ಗೊತ್ತಾಯ್ತು ಸಾರ್?
ದಂತ ವೈದ್ಯ: ಹೆಂಗೆ ಗೊತ್ತಾಯ್ತು ಅಂದ್ರೆ, ಯಾವ ಪ್ರಾಣಿಯೂ ನನ್ನ ಬಳಿಗೆ ಚಿಕಿತ್ಸೆಗೆ ಬಂದಿಲ್ಲ.
ನನನ
ಹೆಂಡತಿ: ಓ ನನ್ನ ಪತಿದೇವರೇ, ನೀವು ಸತ್ತರೆ ನಾನು ಹುಚ್ಚಿಯಾಗಿಬಿಡುತ್ತೇನೆ.
ಗಂಡ: ಹೌದಾ, ಇನ್ನೊಂದು ಮದುವೆಯಾಗುವುದಿಲ್ಲವಾ?
ಹೆಂಡತಿ: ಹುಚ್ಚಿಯಾದಾಗ ಏನು ಬೇಕಾದರೂ ಆಗಬಹುದು!
ನನನ
ಶ್ರೀಮಾನ್ ಗುಂಡಣ್ಣನವರು ಕೆಲವು ಸಂಗತಿಗಳನ್ನು ಸಂಶೋಧನೆ ಮಾಡಿದ್ದಾರೆ. ಅವು ಯಾವುವೆಂದರೆ,
ಸಿಗರೇಟ್‌ನಿಂದ ಹೊಗೆ ಬರುತ್ತದೆ, ಹೊಗೆಯಿಂದ ಸಿಗರೇಟ್ ಬರೋದಿಲ್ಲ!
ಆಕಾಶದಿಂದ ಮಳೆ ಸುರಿಯುತ್ತದೆ. ಮಳೆಯಿಂದ ಆಕಾಶ ಸುರಿಯೋದಿಲ್ಲ!
ಭೂಮಿ ಮೇಲೆ ಮನುಷ್ಯ ನಿಲ್ಲುತ್ತಾನೆ. ಮನುಷ್ಯನ ಮೇಲೆ ಭೂಮಿ ನಿಲ್ಲೋದಿಲ್ಲ!
ನನನ
ಗುಂಡಿ: ನಾನು ಸತ್ತರೆ ನೀವು ಬೇರೆ ಮದುವೆ ಆಗಲೇಬೇಕು.
ಗುಂಡ: ಸರಿ, ಹಾಗಿದ್ದರೆ ಬೇರೆ ಮದುವೆ ಆಗುವೆ.
ಗುಂಡಿ: ನನ್ನ ಆಭರಣಗಳನ್ನೆಲ್ಲಾ ಅವಳಿಗೆ ಕೊಡ್ತೀರಾ?
ಗುಂಡ: ಹೌದು. ಕೊಡಬೇಕಲ್ವಾ.
ಗುಂಡಿ: ನಾನು ಬಳಸುತ್ತಿದ್ದ ಜೀನ್ಸ್ ಪ್ಯಾಂಟ್‌ಗಳನ್ನು?
ಗುಂಡ: ಅದು ಕೊಡಕ್ಕಾಗಲ್ಲ.
ಗುಂಡಿ: ಯಾಕೆ?
ಗುಂಡ: ಅವಳ ಸೊಂಟದ ಅಳತೆ 28, ನಿನ್ನ ಸೈಜ್ ಅವಳಿಗೆ ಆಗಲ್ಲ.
ನನನ
ಭಿಕ್ಷುಕಿ: ಅಣ್ಣಾ... ಮೂರು ದಿನದಿಂದ ಊಟ ಮಾಡಿಲ್ಲ. ಎರಡು ರುಪಾಯಿ ಕೊಡಿ.
ಗುಂಡ: ಮೂರು ದಿನದಿಂದ ಊಟ ಮಾಡಿಲ್ಲಾಂತೀಯಾ... ಎರಡು ರುಪಾಯಿನಲ್ಲಿ ಏನು ಮಾಡ್ತೀಯ?
ಭಿಕ್ಷುಕಿ: ಎಷ್ಟು ಕೆಜಿ ಕಮ್ಮಿ ಆಗಿದ್ದೀನೀಂತ ನೋಡ್ತೀನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.