ಪ್ರೇಮ

ಜನನ ಮರಣಗಳ
ನೋಂದಣಿಯಂತೆ
ಈ ಪ್ರೀತಿ ಪ್ರೇಮಗಳ
ನೋಂದಣಿಯೊಂದಿದ್ದರೆ
ಎಷ್ಟು ಕೇಸುಗಳ
ದಾಖಲಿಸಬಹುದಿತ್ತೋ
ಈ ಪ್ರೇಮದ ಬೀಜ ಚಿಗುರಿ
ಮರವಾಗಿ ನೆರಳು
ಕೊಡುವಂತಿದ್ದರೆ
ಎಷ್ಟು ಜೀವಗಳು
ತಣ್ಣಗಿರಬಹುದಿತ್ತೋ
ನನ್ನಿಂದ ಆರಾಧಿಸಿಕೊಳ್ಳದೆ
ಹೋಗುತ್ತಿರುವ
ನತದೃಷ್ಟ ದೇವತೆಯೇ
ಯಾವ ಯುಗದಲ್ಲಿ ಅವತರಿಸುವೆ
ಎಂಬುದನ್ನಾದರೂ ತಿಳಿಸಿ ಹೋಗು
ಮುಂದಿನ ಜನ್ಮದಲ್ಲಾದರೂ
ನಿನ್ನ ಭಕ್ತನಾಗಿ ಮತ್ತೆ ಹುಟ್ಟುತ್ತೇನೆ
ಇಲ್ಲ ಯಾರ ಪರವಾಗಿಯೂ
ಸಾಕ್ಷಿ ಹೇಳದೆ ಒದ್ದಾಡಿ
ತಲೆ ಮರೆಸಿಕೊಳ್ಳುವ ಆ
ಅಮಾಸಿ ಚಂದ್ರನ ಮೇಲೆ
ಒಂದು ದೂರನ್ನಾದರೂ
ನೀಡುತ್ತೇನೆ
ಭೂಮಿ ಗುಂಡಗಿದೆಯಂದು
ಯಾಕಾದರೂ ಪದೇ ಪದೇ
ಸಿಕ್ಕುತ್ತಿಯೋ
ವಾರೆಗಣ್ಣಿನಲ್ಲೇ ಕುಶಲ ವಿಚಾರಿಸಿ ಹೊರಟು ಹೋಗು
ಪಾಪ ಮಾಡಿದ
ಅಪರಾಧಿಯಂತೆ
ನಾನಾದರೂ ತಲೆ ತಗ್ಗಿಸಿ
ಓಡಾಡುತ್ತೇನೆ
ಇಲ್ಲ ಈ ಗಡಿಬಿಡಿಯ
ಸಂತೆಯಲಿ ಮತ್ತೆ
ಸಿಗಬಹುದೇನೋ ಎಂದು
ನಿನ್ನ ಕಣ್ಣುಗಳಿಗಾಗಿ
ಹುಚ್ಚನಂತೆ ಹುಡುಕುತ್ತೇನೆ.
-ಸ್ವಾಮಿ ಪೊನ್ನಾಚಿ, ಕೊಳ್ಳೇಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


