ನಾನು ಪಿಯುಸಿ ಮೊದಲ ವರ್ಷ (ಸೈನ್ಸ್) ಮುಗಿಸಿದ್ದೀನಿ. ನನಗೆ ಒಂದನೇ ಕ್ಲಾಸ್ನಿಂದಲೂ ಗಣಿತ ತುಂಬಾ ಕಷ್ಟದ ವಿಷಯ ಅನ್ನಿಸುತ್ತಾ ಇತ್ತು. ಈಗಲೂ ಅದೇ ಭಾವನೆ ಇದೆ. ಗಣಿತದಲ್ಲಿ ನಾನು ಮುಂದೆ ಬರುವುದು ಹೇಗೆ?
- ಆರ್.ಚಂದ್ರು (ಇ-ಮೇಲ್)
ಗಣಿತ, ವಿಜ್ಞಾನ, ಇಂಗ್ಲಿಷ್ಗಳು ಕಬ್ಬಿಣದ ಕಡಲೆ ಎನ್ನುವ ಭಾವನೆ ಬಾಲ್ಯದಿಂದಲೇ ನಮ್ಮ ಮನದಲ್ಲಿ ಮನೆ ಮಾಡಿರುತ್ತದೆ. ಅದಕ್ಕೆ ಕಲಿಕಾ ವಿಧಾನದಲ್ಲಿನ ಕೆಲವು ನ್ಯೂನತೆಗಳೂ ಕಾರಣ. ನೀವೀಗ ಪಿಯಸಿಯಲ್ಲಿದ್ದೀರಿ. ಇದು ಮಹತ್ವದ ವರ್ಷ. ಗಣಿತದ ಬಗೆಗಿನ ನಿಮ್ಮ ನಕಾರಾತ್ಮಕ ಭಾವನೆ ಹೋಗಲಾಡಿಸಿಕೊಳ್ಳಿ. ಗಣಿತ ನಿಜಕ್ಕಬ ಮೋಜಿನ ವಿಷಯ. ಅದನ್ನು ವಿಷಯವಾಗಿ ಪರಿಗಣಿಸದೇ ಆಟ ಎಂದು ತಿಳಿದುಕೊಳ್ಳಿ. ಆಗ ಎಂಥ ಕ್ಲಿಷ್ಟ ಸಮಸ್ಯೆಯನ್ನೂ ಬಿಡಿಸುವ ಸುಲಭ ದಾರಿ ಕಾಣಿಸುತ್ತದೆ.
-ಡಾ. ಸ್ಯಾಟಲೈಟ್
anekaby2@gmail.com