ಮಹಿಳೆಯರಿಗೆ ಅವಕಾಶವಿಲ್ಲ (ತಿಳ್ಕೊಳೊ ವಿಷ್ಯ)
ಆರೋಪಿ ಪುರುಷ ಆಗಿದ್ದಲ್ಲಿ, ಪೊಲೀಸರು ವಿಚಾರಣೆಗೆ ವಶಕ್ಕೆ ತೆಗೆದುಕೊಂಡಾಗ ಠಾಣೆಯಲ್ಲಿ ಇರಿಸಿಕೊಳ್ಳಲು ಅವಕಾಶವಿದೆ. ಆದರೆ, ಆರೋಪಿ ಮಹಿಳೆ ಆಗಿದ್ದಲ್ಲಿ ರಾತ್ರಿ ವೇಳೆ ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ. ಸಂಜೆ 6 ಗಂಟೆ ನಂತರ ಅವರನ್ನು ಸರ್ಕಾರಿ ಮಹಿಳಾ ವಸತಿ ನಿಲಯಗಳಿಗೆ ಕಳುಹಿಸಬೇಕು. ಬೆಳಗ್ಗೆ ಹೋಗಿ ಮತ್ತೆ ಕರೆದುಕೊಂಡು ಬರಬೇಕು.
ಪೊಲೀಸ್ ವಶದಲ್ಲಿರುವ ವೇಳೆ ಆರೋಪಿಯ ಕುಟುಂಬ ಸದಸ್ಯರು ಅವರನ್ನು ಭೇಟಿ ಮಾಡುವಂತಿಲ್ಲ. ವಕೀಲರಿಗೂ ಅವಕಾಶವಿಲ್ಲ. ತುರ್ತು ವಿಷಯವಿದ್ದರೆ ಮಾತ್ರ ಸಂಬಂಧಿಕರು ಪೊಲೀಸರ ಸಮ್ಮುಖದಲ್ಲಿ ಮಾತುಕರತೆ ನಡೆಸಬಹುದು. ಒಂದು ವೇಳೆ ವಕೀಲರು ಆರೋಪಿಯನ್ನು ಭೇಟಿ ಮಾಡಬೇಕೆಂದಿದ್ದಲ್ಲಿ, ನ್ಯಾಯಾಧೀಶರ ಅನುಮತಿ ಪಡೆದು ಪೊಲೀಸರ ಸಮ್ಮುಖದಲ್ಲೇ ಭೇಟಿ ಮಾಡಬೇಕು. ಪೊಲೀಸರ ವಶದಲ್ಲಿರುವ ಆರೋಪಿಗೆ ಊಟ ತಿಂಡಿ ಎಲ್ಲವನ್ನು ಪೊಲೀಸರೇ ಭರಿಸುತ್ತಾರೆ. ಸಂಬಂಧಿಕರು ಅವರನ್ನು ಭೇಟಿ ಮಾಡಿ ಊಟ, ತಿಂಡಿ-ತಿನಿಸು ಕೊಡುವಂತಿಲ್ಲ. ಏಕೆಂದರೆ ವಶದಲ್ಲಿರುವ ಆರೋಪಿಯ ಸಂಪೂರ್ಣ ಜವಾಬ್ದಾರಿ ಪೊಲೀಸರದ್ದಾಗಿರುತ್ತದೆ.
ಅವನ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾದರೂ ಅದಕ್ಕೆ ಪೊಲೀಸರೇ ಹೊಣೆಯಾಗುತ್ತಾರೆ. ವಶಕ್ಕೆ ತೆಗೆದುಕೊಳ್ಳುವ ವೇಳೆ ಆತನ ಆರೋಗ್ಯ ಹೇಗಿರುತ್ತದೆಯೋ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗಲೂ ಆತನ ಆರೋಗ್ಯ ಸ್ಥಿತಿ ಉತ್ತಮವಾಗಿರಬೇಕು. ಹಾಗಾಗಿ ಪೊಲೀಸ್ ಬಂಧನದಲ್ಲಿರುವಾಗ ಮಾತನಾಡಲು, ಊಟ-ತಿಂಡಿ ನೀಡಲು ಅವಕಾಶವಿಲ್ಲ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

