ಕುಟುಂಬ
ಆ ಕುಟುಂಬ ಊಟದ ಮೇಜಿನ ಸುತ್ತ ಸೇರಿತ್ತು. ಕುಟುಂಬದ ಅತ್ಯಂತ ಹಿರಿಯ ಹುಡುಗ ತಾನು ಪಕ್ಕದ ಬೀದಿಯಲ್ಲಿ ವಾಸಿಸುತ್ತಿರುವ ಹುಡುಗಿಯೋರ್ವಳನ್ನು ಮದುವೆಯಾಗುವುದಾಗಿ ಘೋಷಿಸಿದ.
'ಆದರೆ ಆ ಕುಟುಂಬದವರು ಚಿಕ್ಕಾಸಿಗೂ ಗತಿಯಿಲ್ಲದವರು' ತಂದೆ ಆಕ್ಷೇಪಿಸಿದ.
'ಮತ್ತು ಆಕೆ ಒಂದಿಷ್ಟೂ ಉಳಿತಾಯ ಮಾಡಿಲ್ಲ' ತಾಯಿ ದನಿಗೂಡಿಸಿದಳು.
'ಅವಳಿಗೆ ಕಾಲ್ಚೆಂಡಾಟದ ಬಗ್ಗೆ ಏನೂ ಗೊತ್ತಿಲ್ಲ' ಕಿರಿಯ ಸಹೋದರ ಹೇಳಿದ.
'ಅಷ್ಟೊಂದು ವಿಚಿತ್ರವಾಗಿ ಕೂದಲು ಬಾಚುವವಳನ್ನು ನಾನು ಇಷ್ಟರವರೆಗೆ ನೋಡಿಲ್ಲ' ಸಹೋದರಿ ಅಂದಳು.
'ಅವಳು ಇಡೀ ದಿನ ಕುಳಿತು ಮಾಡುವ ಕೆಲಸವೆಂದರೆ ಕಾದಂಬರಿಗಳನ್ನು ಓದುವುದು' ಚಿಕ್ಕಪ್ಪ ಹೇಳಿದ.
'ಅವಳಿಗೆ ಉಡುಪಿನ ಆಯ್ಕೆಯ ಬಗ್ಗೆ ಒಂದಿನಿತೂ ಸದಭಿರುಚಿ ಇಲ್ಲ' ಚಿಕ್ಕಮ್ಮ ಅಂದರು.
'ಆದರೆ ಪೌಡರ್ ಮತ್ತು ಬಣ್ಣ ಬಳಿಯುವುದಕ್ಕೇನೂ ಕಡಿಮೆಯಿಲ್ಲ' ಅಜ್ಜಿ ಹೇಳಿದಳು.
'ನಿಜ' ಹುಡುಗ ಹೇಳಿದ- 'ಆದರೆ ನಮ್ಮೆಲ್ಲರಿಗಿಂತ ಅವಳಿಗೆ ಹೆಚ್ಚಿನ ಅನುಕೂಲವೊಂದಿದೆ.'
'ಏನದು?' ಪ್ರತಿಯೊಬ್ಬರೂ ಕೇಳಲು ಆತುರರಾಗಿದ್ದರು.
'ಅವಳಿಗೆ ಕುಟುಂಬವಿಲ್ಲ!'
-ನಂದಿನಿ ಡಿ. ಕಾಮತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

