ಜೂಟ್ ಕುಂಡ

ಸೆಣಬಿನ ನಾರಿನಲ್ಲಿ ಏನೆಲ್ಲ ತಯಾರಿಸಬಹುದು? ಬ್ಯಾಗ್, ಕಾರ್ಪೆಟ್, ಜೋಕಾಲಿ ಇತ್ಯಾದಿ ಅಲ್ವಾ? ಆದರೆ ಸೆಣಬಿನ ಕುಂಡವನ್ನು ನೋಡಿದ್ದೀರಾ?
ಇದು ಮಂಗಳೂರಿನ ವುಡ್ಲ್ಯಾಂಡ್ ಹೊಟೇಲಿನಲ್ಲಿ ನಡೆಯುತ್ತಿರುವ 'ಜೂಟ್(ಸೆಣಬು) ಮೇಳ'ದಲ್ಲಿ ಕಂಡುಬಂದ ವಸ್ತು. ಸೆಣಬಿನ ಕುಂಡ ಮತ್ತು 2 ಕ್ವಾಯರ್ ಬಿಲ್ಲೆ(ಸೆಣಬಿನ ಒಣಗಿದ ಹುಡಿಯ ಬಿಲ್ಲೆ) ಬೆಲೆ ರು. 250. ಸುಮಾರು 3 ವರ್ಷ ಬಾಳಿಕೆ ಇದೆ.
ನೇತಾಡಿಸೋ ಹಾಗೆ ತಯಾರಿಸಿರುವ ವೃತ್ತಾಕಾರದ ಕುಂಡದಲ್ಲಿ ಕ್ವಾಯರ್ ಅನ್ನು ನೆನೆ ಹಾಕಿ ಅದರಲ್ಲಿ ಗಿಡ ನೆಡಬಹುದು. ಕ್ವಾಯರ್ ಬಿಲ್ಲೆಯನ್ನು ಹಾಕಿ ನೀರಿನಲ್ಲಿ ನೆನೆ ಹಾಕಿ ಒಂದು ಗಂಟೆಯ ನಂತರ ಬಿಡಿ ಬಿಡಿಯಾಗಿ ಕುಂಡ ತುಂಬಾ ಹರಡಿದರೆ ಸಾಕು. ಅದರಲ್ಲಿ ಗಿಡವನ್ನು ನೆಡಬಹುದು.
ಕ್ವಾಯರ್ ಬಿಲ್ಲೆ ನೀರನ್ನು ಹೀರುತ್ತದೆ ಮತ್ತು ಕುಂಡದಿಂದ ನೀರು ಸೋರದಂತೆ ತಡೆಗಟ್ಟುತ್ತದೆ. ಗಿಡಗಳಿಗೆ ತಂಪಾಗಿರುತ್ತದೆ. ಇದನ್ನು ಮನೆಯ ಒಳಗೆ, ಜಗಲಿಯ ಮಾಡಿನಲ್ಲಿ ನೇತಾಡಿಸಬಹುದು.
ತಿಂಗಳಿಗೆ 500 ಕುಂಡಗಳು ಊಟಿ, ಕೊಡೈಕೆನಾಲ್ಗೆ ರವಾನೆಯಾಗುತ್ತಿವೆ. ಜನರು ಇದನ್ನು ತುಂಬಾ ಇಷ್ಟಪಡುತ್ತಿದ್ದು, ತುಂಬಾ ಬೇಡಿಕೆಯಿದೆ ಎನ್ನುತ್ತಾರೆ ತಯಾರಕಿ ಆಂಧ್ರಪ್ರದೇಶದ ಪ್ರೇಮಾ.
- ವಜ್ರಾಕ್ಷಿ ಬಂಟ್ವಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


