ಬೈಟುಕಾಫಿ

ಸಿದ್ಧಾರ್ಥ ರೆಡಿ

ಸಿದ್ಧಾರ್ಥ ರೆಡಿ
Published On :

ಟಿವಿ ಪ್ರಭಾವದಿಂದ ರೇಡಿಯೋ ಇತಿಹಾಸ ಪುಟ ಸೇರಿ ಹೋಯಿತು ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ ಈಗ ಮತ್ತೆ ರೇಡಿಯೋ ಜನಪ್ರಿಯವಾಗುತ್ತಿದೆ. ಸಮುದಾಯ ಬಾನುಲಿ ಕೂಡ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದೆ. ತುಮಕೂರಿನ 'ರೇಡಿಯೋ ಸಿದ್ಧಾರ್ಥ 90.8 ಎಫ್‌ಎಂ' ತುಮಕೂರಿನ ಧ್ವನಿ ಎಂಬ ಅಡಿಬರಹದೊಂದಿಗೆ, ಕರ್ನಾಟಕದಲ್ಲೇ ಮೊದಲ ವೆಬ್ ರೇಡಿಯೋ ಎಂಬ ಖ್ಯಾತಿಗೆ ಪಾತ್ರವಾಗಿದೆ.
www.radiosiddhartha.com ದಲ್ಲಿ ಈ ರೇಡಿಯೋ ಕಾರ್ಯಕ್ರಮಗಳು ಸಿಗುತ್ತವೆ. ಈ ಹಿಂದೆ ಕೆಲ ಎಫ್‌ಎಂಗಳನ್ನು ವೆಬ್‌ಗೆ ಅಳವಡಿಸಲಾಗಿದ್ದರೂ, ನೇರವಾಗಿ ಕಾರ್ಯಕ್ರಮ ಕೇಳುವಂಥದ್ದನ್ನು ಯಾರೂ ಡಿಸೈನ್ ಮಾಡಿರಲಿಲ್ಲ. ಆ ಕೊರತೆಯನ್ನು ಈಗ ಸಿದ್ಧಾರ್ಥ ನೀಗಿಸಿದೆ. ತೀರ್ಥಹಳ್ಳಿಯ ವಿ. ಮಂಜೇಶ್ ಈ ವೆಬ್ ರೇಡಿಯೋದ ವಿನ್ಯಾಸಕ.
ಕೆಪಿಸಿಸಿ ಅಧ್ಯಕ್ಷ, ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ. ಜಿ.ಪರಮೇಶ್ವರ್ ಇದರ ರೂವಾರಿ. ಶಿವಾಜಿ ಗಣೇಶನ್ ನಾಯಕತ್ವದಲ್ಲಿ ರಶ್ಮಿ ಅಮ್ಮೆಂಬಳ, ವಿಜಯ ಸಿ.ವಿ., ಭರತ್ ಬಡಿಗೇರ, ವಿನಯಕುಮಾರ್ ಅವರ ತಂಡ ಕ್ರಿಯಾಶೀಲವಾಗಿ ಈ ವೆಬ್ ರೇಡಿಯೋ ರೂಪಿಸುತ್ತಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆ ಹಾಗೂ ಹಾಸನ ಜಿಲ್ಲೆಗಳ ಜನತೆಯೂ ಕೇಳಬಹುದಾದ ಈ ರೇಡಿಯೋದ ಕಾರ್ಯಕ್ರಮಗಳು ಪ್ರತಿ ದಿನ 9 ಗಂಟೆ ಬಿತ್ತರವಾಗುತ್ತವೆ.
ಹಾಡು, ಕಥೆ, ಯಕ್ಷಗಾನ, ವಿಜ್ಞಾನ ಮಾಹಿತಿ, ಕಾವ್ಯ ವಾಚನ, ಇಂಗ್ಲಿಷ್ ಕಲಿಕೆಗಳ ಜತೆಗೆ, ಕುಗ್ರಾಮಗಳಿಗೆ ಹೋಗಿ ಅಲ್ಲಿನ ಸ್ಥಳೀಯರ ಪ್ರತಿಭೆಯನ್ನು ದಾಖಲಿಸಿಕೊಂಡು ಪ್ರಸಾರ ಮಾಡುತ್ತಿದೆ.  ತುಮಕೂರಿನ ಮರಳೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವಿಶಾಲವಾದ ಜಾಗದಲ್ಲಿ ಈ ಸಮುದಾಯ ಬಾನುಲಿ ತಲೆ ಎತ್ತಿದೆ. ಇದರದ್ದೇ ಆದ ಆಕರ್ಷಕ ಸ್ಟುಡಿಯೋ ಇದೆ. ಉತ್ಸಾಹಿ ಯುವಕರ ತಂಡ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಹೊಸ ಆಲೋಚನೆಗಳಿಗೆ ಕಿವಿಗೊಡಲು ತಂಡ ಉತ್ಸುಕವಾಗಿದೆ. ಸಂಪರ್ಕ: 0816-2201342

- ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.