ಬಿಸಿ ಪದಾರ್ಥಗಳನ್ನು ಮುಟ್ಟಿದರೆ ಏಕೆ ಸುಡುತ್ತದೆ?
ಒಂದು ವಸ್ತುವಿನ ಉಷ್ಣಾಂಶ ನಮ್ಮ ದೇಹದ ಉಷ್ಣಾಂಶಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಬಿಸಿ ವಸ್ತು ಎನ್ನುತ್ತೇವೆ. ಅಂತಹ ವಸ್ತುವನ್ನು ಮುಟ್ಟಿದರೆ ಅದರ ಶಾಖ ನಮ್ಮ ದೇಹಕ್ಕೆ ಬರುತ್ತದೆ. ಆಗ ನಮಗೆ ಬಿಸಿ ತಟ್ಟುತ್ತದೆ. ಅದೇ ರೀತಿ ತಣ್ಣನೆಯ ವಸ್ತುವನ್ನು ಮುಟ್ಟಿದಾಗ ನಮ್ಮ ದೇಹದ ಉಷ್ಣಾಂಶ ಆ ವಸ್ತುವಿಗೆ ಹೋಗುತ್ತದೆ.
ಬಿಸಿ ವಸ್ತುವನ್ನು ತಾಕಿಸಿಕೊಂಡರೆ ತಾಕಿದ ಭಾಗದಲ್ಲಿ ಸುಡುತ್ತದೆ. ಹೀಗೆ ಸುಡುವುದಕ್ಕೆ ಕಾರಣ, ನಮ್ಮ ದೇಹ ಕೋಶಗಳಿಂದ ರಚಿತವಾಗಿದೆ. ಈ ಕೋಶಗಳು ಅತಿ ಸೂಕ್ಷ್ಮ ಕಣಗಳಿಂದ ರಚಿತವಾಗಿವೆ. ದೇಹದ ಉಷ್ಣಾಂಶ ಸಾಮಾನ್ಯವಾಗಿರುವಾಗ ಈ ಸೂಕ್ಷ್ಮ ಕಣಗಳು ಚಲಿಸುತ್ತಿರುತ್ತವೆ. ಬಿಸಿ ವಸ್ತುವೊಂದು ದೇಹದ ಭಾಗಕ್ಕೆ ತಾಕಿದಾಗ ಆ ವಸ್ತುವಿನ ಶೀಘ್ರಗತಿಯ ಸೂಕ್ಷ್ಮ ಕಣಗಳು ಬಿಸಿ ತಾಕಿದ ದೇಹದ ಭಾಗದಲ್ಲಿರುವ ಕೋಶಗಳ ಸೂಕ್ಷ್ಮ ಕಣಗಳ ಚಲನೆಯನ್ನು ಮತ್ತಷ್ಟು ಚುರುಕುಗೊಳಿಸುತ್ತವೆ. ಹೀಗೆ ಚುರುಕುಗೊಂಡಾಗ ಉಂಟಾಗುವ ಶೀಘ್ರ ಕಂಪನಗಳನ್ನು ತಡೆದುಕೊಳ್ಳುವ ಶಕ್ತಿ ನಮ್ಮ ದೇಹದ ಜೀವಕೋಶಗಳಲ್ಲಿರುವ ಸೂಕ್ಷ್ಮ ಕಣಗಳಿಗೆ ಇರುವುದಿಲ್ಲ. ಹೀಗಾಗಿ ಈ ಕೋಶಗಳು ಒಡೆಯಲಾರಂಭಿಸುತ್ತವೆ. ಕೋಶಗಳು ಒಡೆಯುವಾಗ ನಮಗೆ ಸುಡುವ ಅನುಭವ ಉಂಟಾಗುತ್ತದೆ. ಆದ್ದರಿಂದ ಬಿಸಿ ತಾಕಿದ ಭಾಗ ಕೆಂಪಾಗಿ ಸುಟ್ಟ ಅನುಭವವಾಗುತ್ತದೆ.
-ಹರಳಹಳ್ಳಿ ಪುಟ್ಟರಾಜ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

