ಬೈಟುಕಾಫಿ

ಎರಡು ಚಕ್ರಗಳು

Published On :

ಚಕ್ರೇಣ ವಿಶ್ವಂ ಯುಧಿ ಮತ್ಸ್ಯಕೇತುಃ
ಪಿತುರ್ಜಿತಂ ವೀಕ್ಷ್ಯ ಸುದರ್ಶನೇನ
ಜಗಜ್ಜಿಗೀಷತ್ಯಮುನಾ ನಿತಂಬದ್ವಯೇನ
ಕಿಂ ದುರ್ಲಭ ದರ್ಶನೇನ
ಶೃಂಗಾರ ವರ್ಣನೆಗಳನ್ನು ನೇರವಾಗಿ ಮಾಡುವುದು ರಸಿಕರ ಲಕ್ಷಣವಲ್ಲ. ಶರೀರದ ಅಂಗಗಳನ್ನು ಮೋಹ ಉಕ್ಕುವಂತೆ, ಪ್ರೀತಿ ಹುಟ್ಟುವಂತೆ ಪರೋಕ್ಷವಾಗಿ ವರ್ಣಿಸುವುದು ಸುಲಭದ ಕೆಲಸವೂ ಅಲ್ಲ. ಅದಕ್ಕೇ ನಮ್ಮ ಪ್ರಾಚೀನ ಕವಿಗಳು ಪುರಾಣ ಕಥೆಗಳ ಮೊರೆ ಹೋಗುತ್ತಾರೆ. ಹಾಗೆ ಪೌರಾಣಿಕ ರೂಪಕದ ಮೂಲಕ ಮಾಡಿದ ಹೋಲಿಕೆಯಿದು.
ಮೀನಕೇತನನಾದ ಶ್ರೀಕೃಷ್ಣ, ಜಗತ್ತನ್ನೇ ಗೆದ್ದಿದ್ದಾನೆ. ಹೇಗೆ? ಸುದರ್ಶನ ಚಕ್ರದ ಮೂಲಕ. ಅದನ್ನು ಪ್ರಯೋಗಿಸಲೇ ಬೇಕೆಂದೇನಿಲ್ಲ, ನೋಡಿದರೂ ಸಾಕು, ಶತ್ರುಗಳು ತಲ್ಲಣಗೊಳ್ಳುತ್ತಾರೆ. ಇದನ್ನು ನೋಡಿದನಲ್ಲ ನಮ್ಮ ಕೃಷ್ಣಸುಕುಮಾರ ಮನ್ಮಥ! ತಾನೂ ಜಗತ್ತನ್ನು ಗೆಲ್ಲಲು ಪ್ಲಾನ್ ಹಾಕಿದ. ಅವನ ಬಳಿ ಸುದರ್ಶನ ಚಕ್ರ ಇರಲಿಲ್ಲವಲ್ಲ. ಆದರೆ ಅವನ ತಲೆ ಸುದರ್ಶನಕ್ಕಿಂತಲೂ ವೇಗವಾಗಿ ಓಡಿತು! ಎರಡು ಚಕ್ರಗಳನ್ನು ಜಗತ್ತು ಗೆಲ್ಲಲು ಬಳಸಿಕೊಂಡ. ಅವ್ಯಾವುವು? ಇನ್ಯಾವುದು, ತರುಣಿಯರ ನಿತಂಬಗಳಲ್ಲದೆ! ಇವನು ಅಪ್ಪನಿಗಿಂತಲೂ ಬಲಶಾಲಿ ಎಂದಾಯಿತಲ್ಲವೆ? ಅಪ್ಪನ ಬಳಿ ಇದ್ದದ್ದು ಒಂದೇ ಚಕ್ರ, ಇವನ ಬಳಿ ಎರಡು! ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಪುರುಷ ತನಗೆ ತಕ್ಕ ಸ್ತ್ರೀಯನ್ನು ಆರಿಸಿಕೊಳ್ಳುವ ಮುನ್ನ ಮೇಲ್ನೋಟಕ್ಕೆ ಕಾಣುವ ಎರಡು ಸಂಗತಿಗಳನ್ನು ಗಮನಿಸುತ್ತಾನಂತೆ. ಅದರಲ್ಲಿ ಎರಡನೆಯದೇ ನಿತಂಬ. ನಿತಂಬಪುಷ್ಟಿ ಫಲವತ್ತತೆಯ ಪ್ರತೀಕ ಎಂಬ ನಂಬಿಕೆ ಮನುಷ್ಯನ ಗ್ರಹಿಕೆಯಲ್ಲಿ ಆದಿಯಿಂದಲೂ ಇದೆ.

= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.