ಬೈಟುಕಾಫಿ

ಎಲ್ಲರೂ ಸಮಾನರು!

Published On :

ಉದ್ಯೋಗ ನಿಮಿತ್ತವೋ, ಬಂಧುಗಳನ್ನು ಕಾಣಲೆಂದೋ ನಾವು ಟ್ರೇನ್‌ನಲ್ಲಿಯೋ, ಬಸ್ಸಿನಲ್ಲಿಯೋ, ವಿಮಾನದಲ್ಲಿಯೋ ಪ್ರಯಾಣಿಸುತ್ತೇವೆ ಅಂದುಕೊಳ್ಳಿ. ಹೀಗೆ ನಾವು ಪ್ರಯಾಣಿಸುವಾಗ, ಅದನ್ನು ಬಳಸುವ ಪ್ರಯಾಣಿಕರು ಬೇರೆ ಬೇರೆ ಅಂತಸ್ತಿನವರಾಗಿದ್ದರೂ, ಉಪಯೋಗಿಸುವ ವಸ್ತು ಎಲ್ಲರಿಗೂ ಸಮವಾಗಿಯೇ ಇರುತ್ತದೆ. ಕೋಟ್ಯಧಿಪತಿ, ನೌಕರ, ಉದ್ಯೋಗಪತಿ, ಪುರುಷ, ಸ್ತ್ರೀ, ಬಾಲಕ, ವೃದ್ಧ ಎಲ್ಲರಿಗೂ ಸಿಗುವ ಅನುಕೂಲ ಒಂದೇ ಆಗಿರುತ್ತದೆ. ಆಸನಗಳು, ಕಿಟಕಿಗಳಿಂದ ಹಿಡಿದು, ಉಪಯೋಗಿಸುವ ಶೌಚಾಲಯದವರೆಗೆ ಎಲ್ಲವೂ ಎಲ್ಲರಿಗೆ ಸಮನಾದದ್ದಾಗಿರುತ್ತದೆ. ಕೋಟ್ಯಧಿಪತಿಯೂ, ಸಾವಿರದ ಸಂಬಳ ಪಡೆಯುವವನೂ, ಸಾಲ ಮಾಡಿ ಪ್ರಯಾಣಿಸುವವನೂ ನೀಡಬೇಕಾದ ಪ್ರಯಾಣದ ದರವೂ ಒಂದೇ, ಅವರು ಪಡೆಯುವ ಸೌಲಭ್ಯವೂ ಒಂದೇ. ಒಂದು ವಿಷಯದ ಬಗ್ಗೆ ಚರ್ಚಿಸಲು ಬೇರೆ ಬೇರೆ ಕಂಪನಿಯ ಪ್ರತಿನಿಧಿಗಳು ಒಂದು ಕಡೆ ಸಭೆ ಸೇರಿದ್ದಾರೆಂದು ಇಟ್ಟುಕೊಳ್ಳೋಣ. ಅಪರಿಚಿತರ ಸಭೆಯ ಒಳ ಹೊಕ್ಕಾಗ, ಹೊರಗಿನಿಂದ ಬಂದವನಿಗೆ ಎಲ್ಲರೂ ಸಮಾನರಾಗಿಯೇ ಕಾಣುತ್ತಾರೆ. ಅಲ್ಲಿ ಬಂದ ಅಪರಿಚಿತರು ತಮ್ಮ ಪರಿಚಯ ಹೇಳಿಕೊಳ್ಳುವವರೆಗೆ, ಅಷ್ಟೇ ಅಲ್ಲ, ದೃಢಪಡಿಸುವವರೆಗೆ ಯಾರು ಯಾರೆಂಬುದನ್ನು ಊಹಿಸುವುದು ಕಷ್ಟ. ಮಾಲೀಕನೂ, ವ್ಯವಸ್ಥಾಪಕನೂ, ಸಹಾಯಕನೂ ಒಂದೇ ರೀತಿ ಕಾಣುತ್ತಿರುತ್ತಾರೆ. ತಾವು ಯಾರೆಂದು ದೃಢೀಕರಿಸುವುದಕ್ಕಾಗಿಯೇ ವಿಸಿಟಿಂಗ್ ಕಾರ್ಡ್‌ಗಳಂತಹ ಗುರುತಿನ ಚೀಟಿಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಆದರೆ ಅಲ್ಲಿಯವರೆಗೆ ಇವರನ್ನೆಲ್ಲ ಹೊಸದಾಗಿ ನೋಡುವ ವ್ಯಕ್ತಿಗೆ ಎಲ್ಲರೂ ಸಮಾನರಾಗಿಯೇ ಕಾಣುತ್ತಾರೆ. ಹಾಗೆಯೇ ಅಲ್ಲಿರುವವರು ಯಾವುದೇ ಸ್ಥಾನ ಹೊಂದಿದ್ದರೂ, ಹಣಕಾಸಿನ ವಿಷಯದಲ್ಲಿ, ಶ್ರೀಮಂತಿಕೆಯಲ್ಲಿ ಯಾವ ಸ್ತರದಲ್ಲಿದ್ದರೂ, ಆ ಕ್ಷಣದಲ್ಲಿ ಅವರು ಅನುಭವಿಸುವ ಸೌಕರ್ಯ ಒಂದೇ ಆಗಿರುತ್ತದೆ ಎಂದಾದರೆ ಆ ಕ್ಷಣದಲ್ಲಿ ಶ್ರೀಮಂತಿಕೆಯಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಬಳಸುವಾಗ ಅವರೆಲ್ಲ ಒಂದೇ ಸ್ತರದಲ್ಲಿದ್ದಂತೆ ಆಯಿತು. ಅಲ್ಲವೇ?
(ಮುಂದುವರಿಯುವುದು)

-ಕಿರಣ್ ಉಪಧ್ಯಾಯ
 keyrun1970@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.