ಕಾವ್ಯ ಮತ್ತು ನಾರಿ
ಒಳ್ಳೆಯ ಕಾವ್ಯದ ಲಕ್ಷಣ ಏನು? ಇದು ಸಾಹಿತ್ಯರಸಿಕರನ್ನು ಕಾಡುವ ಪ್ರಶ್ನೆ. ಮಹಿಳೆಯ ನೈಜ ಸೌಂದರ್ಯವನ್ನು ಕಾಣುವ ಬಗೆ ಹೇಗೆ? ಇದು ರಸಿಕರನ್ನು ಕಾಡುವ ಪ್ರಶ್ನೆ. ಎರಡಕ್ಕೂ ಒಂದೇ ಉತ್ತರ ಕೊಡಲು ಸಾಧ್ಯವಿಲ್ಲವೆ? ಆಗ ಸಿಗುತ್ತದೆ ಮಜಾ!
ಅರ್ಥೋ ಗಿರಾಮಪಿಹಿತಃ ವಿಹಿತಶ್ಚ ಕಶ್ಚಿತ್
ಸೌಭಾಗ್ಯಮೇತಿ ಮರಹಟ್ಟವಧೂಕುಚಾಭಃ
ನಾಂಧ್ರೀಪಯೋಧರ ಇವಾತಿತರಾಂ ಪ್ರಕಾಶೋ
ನೋ ಗುರ್ಜರೀಸ್ತನ ಇವಾತಿತರಾಂ ನಿಗೂಢಃ
ಒಬ್ಬ ಕವಿ ಸಾಕಷ್ಟು ದೇಶ ದೇಶ ತಿರುಗಿ ಭೋಜರಾಜನ ಆಸ್ಥಾನಕ್ಕೆ ಬಂದನಂತೆ. ಆತನ ಇತಿವೃತ್ತ ಕೇಳಿದ ಬಳಿಕ ಅರಸು ಕೇಳಿದ: 'ನೀವು ಕೇಳಿದ ಒಳ್ಳೆಯ ಕಾವ್ಯ ಹೇಗಿತ್ತು? ನೀವು ಕಂಡ ಚೆಲುವೆ ಹೆಣ್ಣುಮಕ್ಕಳು ಹೇಗಿದ್ದರು?' ಆ ಕವಿಯೂ ರಸಿಕನೇ. ಉತ್ತರಿಸಿದ: ಗುಜರಾತಿನ ತರುಣಿ ತನ್ನ ಎದೆಗಳನ್ನು ಸೆರಗಿನಿಂದ ಪೂರ ಮರೆಸಿಬಿಡುತ್ತಾಳೆ. ಕವಿತೆ ಹಾಗಿರಬಾರದು. ಅರ್ಥವನ್ನು ಪೂರಾ ಮುಚ್ಚಿಟ್ಟುಕೊಂಡರೆ ಯಾರಿಗೆ ತಾನೆ ಸುಖ? ಆಂಧ್ರದ ಸ್ತ್ರೀ ತುಂಬಿದೆದೆಯನ್ನು ಸಂಪೂರ್ಣ ತೆರೆದಿಟ್ಟಿರುತ್ತಾಳೆ. ಕವಿತೆ ಹಾಗಿದ್ದರೂ ಚೆನ್ನಲ್ಲ. ಅಷ್ಟು ನೇರ ಲಭ್ಯತೆಯಲ್ಲಿ ಯಾವ ಸ್ವಾರಸ್ಯ ತಾನೆ ಇದೆ? ಅದು ನೋಟಕರಿಗೆ ಮುಜುಗರ ತರಿಸುವುದಿಲ್ಲವೆ? ಮಹಾರಾಷ್ಟ್ರದ ಲಲನೆಯಂತೆ ಅರ್ಧ ತೆರೆದು ತೋರಿಸಬೇಕು. ಕವಿತೆಯ ಅರ್ಥ ಮುಚ್ಚಿಟ್ಟೂ ಬಿಚ್ಚಿಟ್ಟಂತೆ ಇದ್ದರೆ ಸೊಗಸು.
ಈತನ ಕಾಲದಲ್ಲಿ ಕೇರಳದ ನಾರಿಯರಂತೆ ಆಂಧ್ರಿಯರೂ ಮುಕ್ತವಕ್ಷದವರಾಗಿದ್ದಿರಬೇಕು. ಈ ಕವಿಯ ಅಧ್ಯಯನ ಎಷ್ಟು ವಿಶಾಲವಾಗಿದೆ, ಆತ ಎಲ್ಲೆಲ್ಲ ತಿರುಗಾಡಿ ಏನೆಲ್ಲ ನೋಡಿರಬಹುದು ಲೆಕ್ಕ ಹಾಕಿ!
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

