ವಧು-ವರರ ಆಟಗಳು

ಮದುವೆಯ ದಿನ ವಧು- ವರರಿಗೆ ಕೆಲವು ಆಟಗಳನ್ನು ಆಡಿಸುವುಂಟು. ಉದಾಹರಣೆಗೆ- ವೀಳ್ಯೆದೆಲೆ ಹಾಗೂ ಅಡಕೆಗಳನ್ನು ಚೆಲ್ಲಿ ಅವುಗಳನ್ನು ಬೇಗಬೇಗನೆ ಆರಿಸಿಕೊಳ್ಳುವುದು; ಕುಂಕುಮ ನೀರು ತುಂಬಿದ ಬೋಗುಣಿಯಲ್ಲಿ ಉಂಗುರ ಹಾಕಿ, ಅದನ್ನು ಆರಿಸಿಕೊಡುವಂತೆ ಹೇಳುವುದು ಇತ್ಯಾದಿ. ಇವುಗಳ ಉದ್ದೇಶ ಹಾಗೂ ಅರ್ಥವೇನು?
ಶಬ್ದಾರ್ಣವದಲ್ಲಿ ಇಂಥದೇ ಒಂದು ಆಟದ ವರ್ಣನೆಯಿದೆ. ನೋಡಿ:
ರತ್ನದಿರ್ವಾಲುಕಾದೌ ಗುಪ್ತಿರ್ದ್ರಷ್ಟವ್ಯ ಕರ್ಮಭಿಃ
ಬಾಲಿಕಾಭಿಕೃತೇ ಕ್ರೀಡಾನಾಮ್ನಾ ಗೂಢಮಣಿ ಸ್ಮೃತಾ
ರಾಸಕ್ರೀಡಾ ಗೂಢಮಣಿರ್ಗುಪ್ತ ಕೇಳಿಸ್ತುಲಾಯನಂ
ಪಿಂಡಕಂದುಕದಂಡಾದ್ಯೈಃ ಸ್ಮೃತಾ ದೈಶಿಕ ಕೇಲಯಃ
ರತ್ನವೊಂದನ್ನು ಅರಮನೆಯ ಒಳಪ್ರಾಂಗಣದಲ್ಲಿ, ಕೋಣೆಯಲ್ಲಿ ಅಥವಾ ಹೊರಗೆ ನದಿಯ ಮರಳಿನ ದಂಡೆಯಲ್ಲಿ ಬಚ್ಚಿಡುವುದು; ಇಬ್ಬರಿಗೂ ಕೆಲವು ಸುಳಿವುಗಳನ್ನು ಕೊಟ್ಟು ಅದನ್ನು ಪತ್ತೆ ಮಾಡುವ ಆಟಕ್ಕೆ ಹಚ್ಚುವುದು. ಹೀಗೆ ಬಚ್ಚಿಟ್ಟಿದ್ದನ್ನು ಪತ್ತೆ ಹಚ್ಚುವ ಸಂದರ್ಭದಲ್ಲಿ ಸಹಜವಾಗಿಯೇ ನೂತನ ವಧೂವರರು ಮುಖಾಮುಖಿಯಾಗಬೇಕು. ಕೈಗೆ ಕೈಯ ಸ್ಪರ್ಶ, ಮೈಗೆ ಮೈಯ ಸ್ಪರ್ಶ ಹಿತವಾಗಿ ಆಗಬೇಕು. ನೋಟಗಳು, ಸ್ಪರ್ಶಗಳ ವಿನಿಮಯ ಹೆಚ್ಚಬೇಕು. ಮುಜುಗರದ ಪೊರೆ ನಿಧಾನವಾಗಿ ತಿಳಿಯಾಗಬೇಕು. ಆಗಲೇ ಇಬ್ಬರೂ ಪ್ರಥಮ ರಾತ್ರಿಯ ಸಮಾಗಮಕ್ಕೆ ಮಾನಸಿಕವಾಗಿ ಸಿದ್ಧರಾಗುವುದು. ಇಲ್ಲವಾದರೆ ಒಂದು ಉಂಗುರಕ್ಕಾಗಿ ಸಣ್ಣ ಬಾಯಿಯ ಇಕ್ಕಟ್ಟಿನ ಪಾತ್ರೆಯಲ್ಲಿ ಇಬ್ಬರ ಕೈಯೂ ಅಷ್ಟು ಹೊತ್ತೇಕೆ ತಡಕಾಡಬೇಕು? ಅಡಗಿಸಿಟ್ಟ ರತ್ನವನ್ನು ಹುಡುಕುತ್ತ ಇನ್ಯಾವುದೋ ರತ್ನವನ್ನು ಅನ್ವೇಷಿಸಬೇಕು?
ಈಗಿನ ಭಾವಿ ವಧು- ವರರದೂ ಹಲವು ಆಟಗಳಿವೆ. ಅವು ಮೊಬೈಲ್‌ಗಳಲ್ಲಿ, ಫೇಸ್‌ಬುಕ್‌ಗಳಲ್ಲಿ ನಡೆಯುತ್ತವೆ. ಅಲ್ಲಿ ಹಿರಿಯರ ನಿರ್ದೇಶನವೂ ಬೇಕಿಲ್ಲ.
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


