ಬೈಟುಕಾಫಿ

ನಾರಿನ ಮ್ಯಾಜಿಕ್ ಏನು ಎನ್ನುವುದು ನಿಗೂಢ!

ನಾರಿನ ಮ್ಯಾಜಿಕ್ ಏನು ಎನ್ನುವುದು ನಿಗೂಢ!
Published On :

ಮುಂಬೈನ ಮಲ್ಹೋತ್ರಾ ಅವರು ಕೈಗೊಂಡಿದ್ದ ರೀತಿಯ ಅಧ್ಯಯನವನ್ನೇ ನಾರ್ವೆಯಲ್ಲೂ ಕೈಗೊಳ್ಳಲಾಗಿತ್ತು. ಅಲ್ಲಿ ಅಧಿಕ ನಾರಿನ ಅಂಶ ಇರುವ ಆಹಾರ ಸೇವಿಸುವವರು ಮತ್ತು ಕಡಿಮೆ ನಾರಿನ ಅಂಶ ಇರುವ ಆಹಾರ ಸೇವಿಸುವವರು ಎಂಬುದಾಗಿ ಎರಡು ಗುಂಪು ಮಾಡಿಕೊಳ್ಳಲಾಗಿತ್ತು. ಅದರ ಫಲಿತಾಂಶವೂ ಮಲ್ಹೋತ್ರಾ ಕಂಡುಕೊಂಡ ಫಲಿತಾಂಶದಂತೆಯೇ ಇತ್ತು. ಅಲ್ಲಿ ಕಡಿಮೆ ನಾರಿನ ಆಹಾರ ಸೇವನೆ ರೂಢಿಸಿಕೊಂಡಿದ್ದ ಶೇ 80ರಷ್ಟು ಜನರಲ್ಲಿ ಅಲ್ಸರ್ ಮತ್ತೆ ಕಾಣಿಸಿಕೊಂಡಿದ್ದರೆ, ಒಮ್ಮೆ ಗುಣಮುಖರಾದ ಬಳಿಕವೂ ಅಲ್ಸರ್ ಬಾಧೆಯಿಂದ ಬಳಲಿದವರ ಪ್ರಮಾಣ ಶೇ 45ರಷ್ಟಿತ್ತು. ಈ ಎರಡು ಅಧ್ಯಯನಗಳನ್ನು ಆಧಾರವಾಗಿಟ್ಟುಕೊಂಡು ಗಾಯ ಬೇಗ ಒಣಗಲು ಫೈಬರ್ ಸಹಾಯಕ, ಆದ್ದರಿಂದ ಅಲ್ಸರ್‌ಗೆ ತುತ್ತಾದವರಿಗೆ ಅಧಿಕ ನಾರಿನ ಆಹಾರವೇ ಸೂಕ್ತ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಈಗೀಗ ವೈದ್ಯರು ಕೂಡ ನಾರಿನ ಅಂಶ ಅಧಿಕವುಳ್ಳ ಆಹಾರಗಳನ್ನೇ ಸೇವಿಸಲು ಸಲಹೆ ಮಾಡುತ್ತಿದ್ದಾರೆ.

ಹಾಗಾದರೆ ನಾರು ಮಾಡುವ ಮ್ಯಾಜಿಕ್ ಆದರೂ ಏನು? ಅದಕ್ಕೆ ಇನ್ನೂ ಖಚಿತ ಉತ್ತರ ಸಿಕ್ಕಿಲ್ಲ. ಒಂದು ಸಿದ್ಧಾಂತ ಎಂದರೆ ಗ್ಯಾಸ್ಟ್ರಿಕ್ ಆ್ಯಸಿಡ್‌ಗಳ ಸಾಂದ್ರತೆಯನ್ನು ನಾರು ಕಡಿಮೆ ಮಾಡುತ್ತದೆ, ಅಲ್ಲದೆ ಜೀರ್ಣಾಂಗಗಳ ಪೊರೆಗಳನ್ನು (ವೈದ್ಯಕೀಯ ಭಾಷೆಯಲ್ಲಿ 'ವಾಲ್‌' ಎಂದು ಹೇಳುತ್ತಾರೆ) ಸುದೃಢಗೊಳಿಸುತ್ತದೆ ಎನ್ನುವುದು. ಅದೂ ಒಂದು ಕಾರಣ ಇರಬಹುದು. ನಿರ್ದಿಷ್ಟವಾಗಿ ನಾರು ಯಾವ ರೀತಿ ಜೀರ್ಣಾಂಗಗಳ ವೃಣ ಒಣಗಲು ನೆರವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳಂತೂ ನಡೆದಿವೆ.

ಇಷ್ಟೆಲ್ಲ ಓದಿದ ನಂತರ ನೀವೇನೂ ಗಾಬರಿ ಬೀಳಬೇಕಿಲ್ಲ. ನಮ್ಮಲ್ಲಿ ಬತ್ತ ಹೇಗೋ ಹಾಗೆ ಉತ್ತರದಲ್ಲಿ ಗೋಧಿ ಪ್ರಮುಖ ಬೆಳೆ. ಅಲ್ಲಿನ ಭೌಗೋಳಿಕ ಪರಿಸ್ಥಿತಿ ಬೇರೆ, ಇಲ್ಲಿನ ಸನ್ನಿವೇಶ ಬೇರೆ. ಅದೆಲ್ಲವೂ ಅನುಗುಣವಾಗಿ ಆಹಾರ ಪದ್ಧತಿಯೂ ರೂಪುಗೊಂಡಿದೆ. ಆದ್ದರಿಂದ ಆತಂಕ ಅನಗತ್ಯ. ಆದರೆ ಅಲ್ಸರ್‌ನಂಥ ಕಾಯಿಲೆ ಕಾಣಿಸಿಕೊಂಡಾಗ ಅಕ್ಕಿ ಬಳಕೆಯನ್ನು ಸ್ವಲ್ಪ ಕಡಿಮೆ ಮಾಡಿಕೊಂಡು ನಾರಿನ ಅಂಶವಿರುವ ಆಹಾರ, ಹಣ್ಣು, ತರಕಾರಿಗಳನ್ನು ಜಾಸ್ತಿ ಸೇವಿಸಿದರೆ ಆಯಿತು. ಗೋಧಿ ಅಲ್ಲದೆ ಬೇಳೆಕಾಳುಗಳು, ಕಾಲಿಫ್ಲವರ್, ಬ್ರಕೋಲಿ, ಕ್ಯಾಬೇಜ್, ಹಸಿರು ಸೊಪ್ಪುಗಳು, ಸೋಂಪು, ಬೀನ್ಸ್, ಅಣಬೆ, ಕಿತ್ತಳೆ ಮತ್ತು ಮೂಸುಂಬೆ ಹಣ್ಣುಗಳು, ಬೆರ್ರಿ ಹಣ್ಣುಗಳು, ರಾಸ್‌ಬೆರ್ರಿ ಹಣ್ಣುಗಳು, ಸೇಬು ಹಣ್ಣು, ಅವರೆಕಾಳು, ಬಾದಾಮಿ, ಬಾರ್ಲಿ, ಜೋಳ ಇವುಗಳಲ್ಲಿ ನಾರಿನ ಅಂಶ ಅಧಿಕವಾಗಿರುತ್ತದೆ ಎನ್ನುವ ಸಂಗತಿಯಂತೂ ನಿಮಗೆ ತಿಳಿದೇ ಇದೆಯಲ್ಲ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.