ಅನಿಶ್ಚಿತ ಪ್ರಯಾಣ
ಖಾಸಗಿ ಹಾಗೂ ಸರ್ಕಾರಿ ವಾಹನ ವ್ಯವಸ್ಥೆಯು ಅತ್ಯಂತ ಬಿನ್ನವಾಗಿದೆ. ಏಕೆಂದರೆ ಖಾಸಗಿ ವಾಹನ ಪ್ರಯಾಣವು ಸ್ವಚ್ಚತೆ ಹಾಗೂ ಸೀಟಿನ ವ್ಯವಸ್ಥೆಯಿಂದ ಕೂಡಿದ್ದರೂ ಸಹ ಇದು ಬಡವರಿಗೆ ಗಗನ ಕುಸುಮವಾಗಿದೆ. ಪ್ರಯಾಣಿಕರಿಗೆ ಸರಕಾರಿ ಸೌಲಭ್ಯವು ದೊರೆಯುವುದಿಲ್ಲವಾದ್ದರಿಂದ ಸರ್ಕಾರಿ ವಾಹನಗಳು ಏನಾದರು ಅವಗಢ ಸಂಭವಿಸಿದಾಗ ಪರಿಹಾರವನ್ನು ದೊರೆಯುತ್ತದೆ. ಪ್ರಯಾಣಿಕರಿಗೆ ಒಂದು ಭದ್ರತೆ ಎಂಬುದಿರುತ್ತದೆ. ಆದರೆ, ಖಾಸಗಿ ವಾಹನವು ನಿಯಂತ್ರಣ ರಹಿತ ಹಾಗೂ ಅನಿಶ್ಚಿತ ಪ್ರಯಾಣ ವ್ಯವಸ್ಥೆಯನ್ನು ಹೊಂದಿರುತ್ತದೆ. ನಿಗದಿತ ವೇಳೆಯನ್ನು ಹಾಕಿಕೊಂಡಿರುವುದು ಪ್ರವಾಸ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಖಾಸಗಿ ವಾಹನವು ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯಲ್ಲೂ ಸಂಚರಿಸಲು ಸೂಕ್ತವಾಗಿಲ್ಲ. ಪ್ರಾಯಾಣಿಕರನ್ನು ಕುರಿಗಳಂತೆ ತುಂಬಿಕೊಂಡು ಬೇಕೆಂದಲ್ಲಿ ನಿಲುಗಡೆ ಕೊಡುವುದರಿಂದ ಪ್ರಯಾಣಿಕರಿಗೆ ತಮ್ಮ ಸ್ಥಳಗಳಿಗೆ ಸರಿಯಾದ ಸಮಯಕ್ಕೆ ತಲುಪುವುದು ಕಷ್ಟವಾಗುತ್ತದೆ.
-ಜೊತೆಪ್ಪ.ಮಾ.ಕಪರಟ್ಟಿ, ಮಹಾಲಿಂಗಪುರ
ಗ್ರಾಹಕರ ಸೇವೆಯೇ ಮೂಲ ಮಂತ್ರ
ಖಾಸಗಿ ಬಸ್ ಸುರಕ್ಷಿತ ಎಂದು ಹೇಳಬಹುದು. ಮೇಲ್ವಿಚಾರಕರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಾರೆ. ಅಲ್ಲದೆ ಅದಕ್ಕೆ ತಕ್ಕ ಹಾಗೆ ಬೋನಸ್ ಕೂಡ ಪಡೆಯುತ್ತಾರೆ. ಇದರಿಂದ ಕೆಲಸದಲ್ಲಿ ಆಸಕ್ತಿ ಮೂಡುತ್ತದೆ. ಈ ಬಸ್ಗಳು ಶುಚಿಯಾಗಿರುವುದರಿಂದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಪ್ರಯಾಣಿಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸೌಕರ್ಯಗಳನ್ನು ಒದಗಿಸುತ್ತಾರೆ. ಅಲ್ಲದೆ ಪ್ರಯಾಣಿಕರಿಂದ ಸಲಹೆ-ಸೂಚನೆಗಳನ್ನು ತೆಗೆದುಕೊಂಡು ಅದನ್ನು ಅನುಷ್ಠಾನಕ್ಕೆ ತರುತ್ತಾರೆ. ವೃದ್ಧರಿಗೆ ಹಾಗೂ ಅಶಕ್ತರಿಗೆ ಬಸ್ ಹತ್ತಲು ಮತ್ತು ಇಳಿಯಲು ಸಹಕರಿಸುತ್ತಾರೆ. ಗ್ರಾಹಕರ ಸೇವೆಯೇ ಮೂಲ ಮಂತ್ರ ಮಾಡಿಕೊಂಡಿರುತ್ತಾರೆ. ದಿನದಿಂದ ದಿನಕ್ಕೆ ಖಾಸಗಿ ಬಸ್ಗಳ ಸಂಖ್ಯೆ ಏರುತ್ತಲೇ ಇವೆ. ಜೊತೆಗೆ ಪ್ರಯಾಣಿಕರ ಒಲವು ಕೂಡ ಹೆಚ್ಚಾಗುತ್ತಿದೆ.
-ಎಂ.ಎಸ್.ಉಷಾ ಪ್ರಕಾಶ್, ಮೈಸೂರು
'ಓವರ್ ಲೋಡ್' ಸರ್ವೇ ಸಾಮಾನ್ಯ!
ಸಾಮಾನ್ಯವಾಗಿ ಜನರು ಬಸ್ ಸಂಚಾರವೆಂದರೆ ಬೇಡಪ್ಪಾ ಬೇಡ ಅಂತಾರೆ. ಅದರಲ್ಲೂ ಖಾಸಗಿ ಬಸ್ ಎಂದರೆ ಸಾಕು ಅಲ್ಲಿಂದ ಕಾಲು ಕೀಳ್ತಾರೆ ಏಕೆಂದರೆ ಖಾಸಗಿ ಬಸ್ ಮಾಲೀಕರಿಗೆ ಜನರ ಪ್ರಯಾಣಕ್ಕೆ ಒತ್ತು ಕೊಡದೆ ದನಗಳಂತೆ ಬಸ್ಸಿನಲ್ಲಿ ಜನರನ್ನು ತುಂಬುತ್ತಾರೆ. ಅವರಿಗೆ ಬಸ್ ಫುಲ್ ಆದರೆ ಸಾಕು. ಆದರೆ, ಪ್ರಯಾಣಿಕರಿಗೆ ಉಸಿರಾಡುವುದಕ್ಕೂ ಕಷ್ಟವಾಗುತ್ತಿರುತ್ತದೆ. ಇಂತಹ ನೂಕ್ಕು ನುಗ್ಗಲಿನಲ್ಲಿ ಜೇಬು ಕತ್ತರಿಸುವರಿಗೆ, ಆಭರಣ ದೋಚುವವರಿಗೆ ಹಬ್ಬ. ಹೀಗೆ ಓವರ್ ಲೋಡ್ ಆದ ಬಸ್ ಕೆಲಮೊಮ್ಮೆ ಆಯ ತಪ್ಪಿ ಪಲ್ಟಿ ಹೊಡೆಯುವ ಸಾಧ್ಯತೆಯೂ ಇರುತ್ತದೆ. ಖಾಸಗಿ ಬಸ್ನವರು ದುಡ್ಡು ಗಳಿಸಲಷ್ಟೇ ಗಮನಹರಿಸುತ್ತಾರೆ. ಇದೆಲ್ಲಾ ಫಜೀತಿಯ ಬದಲು ಸರ್ಕಾರಿ ಬಸ್ಗಳೇ ಸೂಕ್ತ ಮತ್ತು ಹೆಚ್ಚು ಸುರಕ್ಷಿತ.
-ಎಂ.ಜಿ.ಸುರೇಶ್, ಭದ್ರಾವತಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಎಷ್ಟು ಸುರಕ್ಷಿತ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

