ಬೈಟುಕಾಫಿ

ಬಯಲು ಆಲಯದೊಳಗೆ

Published On :

ಸ್ವಾಮಿ ವಿವೇಕಾನಂದರು ಭಾರತಕ್ಕೆ ಮರಳಿದ ಮೇಲೆ ಕೋಲ್ಕತಾದಲ್ಲಿ ಪವಿತ್ರ ಗಂಗಾನದಿಯ ದಡದಲ್ಲಿ ಶ್ರೀರಾಮಕೃಷ್ಣ ಮಹಾಸಂಘವನ್ನು ನಿರ್ಮಿಸಲು ಕಾರ್ಯಸನ್ನದ್ಧರಾದರು. ತಮ್ಮ ಸೋದರಸನ್ಯಾಸಿಗಳಿಗೆ ಸಂಘದ ಬಗ್ಗೆ, ಅದರ ಕಾರ್ಯೋದ್ದೇಶಗಳ ಬಗ್ಗೆ ತಿಳಿಸಿದರು. 'ದೀನದಲಿತ-ದುಃಖಿಗಳಲ್ಲಿ ನೀವು ನಾರಾಯಣನನ್ನು ಕಂಡು ಸೇವೆಗೈಯಬೇಕು, ಇತರರಿಗೆ ಮಾರ್ಗದರ್ಶನ ನೀಡುವಂತಾಗಬೇಕು. ಜನರಲ್ಲಿ ಸೇವಾಸ್ಫೂರ್ತಿಯನ್ನು ತುಂಬಬೇಕು. ಇತರರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಸನ್ಯಾಸಿಗಳ ಸಂಘವನ್ನು ಸ್ಥಾಪಿಸುವುದೇ ನನ್ನ ಜೀವನದ ಮುಖ್ಯ ಗುರಿ' ಎಂಬ ಅಗ್ನಿಸದೃಶ ಮಾತುಗಳಿಂದ ಸೋದರ ಸನ್ಯಾಸಿಗಳನ್ನು ಪ್ರಚೋದಿಸಿದರು.
ಸ್ವಾಮೀಜಿ ಮಾತುಗಳಿಂದ ಸ್ಫೂರ್ತಿಗೊಂಡ ಶಿಷ್ಯರು ಸಂಘದ ಧ್ಯೇಯೋದ್ದೇಶಗಳಿಗೆ ಕಂಕಣಬದ್ಧರಾದರು.
ಒಂದು ದಿನ ಸ್ವಾಮೀಜಿ ರಾಮಕೃಷ್ಣಾನಂದರನ್ನು ಕರೆದು, 'ನೋಡು, ನನ್ನ ಮೇಲೆ ನಿನಗೆ ತುಂಬ ಪ್ರೀತಿ ಅಲ್ಲವೆ?' ಎಂದು ಕೇಳಿದರು. 'ಖಂಡಿತವಾಗಿಯೂ' ಎಂಬ ಉತ್ತರ ಬರುತ್ತಲೇ ಸ್ವಾಮೀಜಿ ತಮ್ಮ ಸೋದರಶಿಷ್ಯರಲ್ಲೇ ಅತ್ಯಂತ ಪ್ರೀತಿಪಾತ್ರರಾದ, ನಂಬಿಗಸ್ತರಾದ ರಾಮಕೃಷ್ಣಾನಂದರನ್ನು ಕರೆದು 'ಸೋದರ, ನೀನು ಮದ್ರಾಸಿಗೆ ಹೋಗಿ ಅಲ್ಲಿ ಶ್ರೀರಾಮಕೃಷ್ಣ ಮಠವನ್ನು ಸ್ಥಾಪಿಸಬೇಕು. ನನಗಾಗಿ ನೀನಿದನ್ನು ಮಾಡಬಲ್ಲೆಯಾ?' ಎಂದರು. ಇದಕ್ಕೆ ರಾಮಕೃಷ್ಣಾನಂದರು ಮರುಮಾತಿಲ್ಲದೆ ಒಪ್ಪಿಕೊಂಡು, ಮದ್ರಾಸಿಗೆ ತೆರಳಿದರು. ಅವರ ಅವಿಶ್ರಾಂತ ಪರಿಶ್ರಮದಿಂದ ಮದ್ರಾಸಿನಲ್ಲಿ ಶ್ರೀರಾಮಕೃಷ್ಣ ಮಠ ಸ್ಥಾಪನೆಗೊಂಡು ತನ್ಮೂಲಕ ಸಮಸ್ತ ದಕ್ಷಿಣ ಭಾರತದಲ್ಲಿ ರಾಮಕೃಷ್ಣ ಚಳವಳಿಯು ಹಬ್ಬಲು ಕಾರಣವಾಯಿತು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.