ಬೈಟುಕಾಫಿ

ಸಾರ್ವಜನಿಕ ತಾಣಗಳಲ್ಲಿ ಪೊಲೀಸರು

Published On :

ಸಿಟಿಜನ್ಸ್ ಫೋರಂ ಸಭೆ ಮೂಲಕ ಜನರಿಂದ ಸಮಸ್ಯೆ ಆಲಿಸುವ ಸಂಚಾರ ಪೊಲೀಸರು ಸಾರ್ವಜನಿಕ ತಾಣಗಳಲ್ಲೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಫೇಸ್‌ಬುಕ್, ಇ-ಮೇಲ್ ಮುಖಾಂತರ ಅವರ ಸಮಸ್ಯೆಯನ್ನು ಆಲಿಸಲು ಮುಂದಾಗಿದ್ದಾರೆ. ಇದು ಬೆಂಗಳೂರು ಪೊಲೀಸರು ಮಾತ್ರವಲ್ಲ. ರಾಜ್ಯದ ನಾನಾ ಜಿಲ್ಲೆಗಳ ಪೊಲೀಸರು ಸಾರ್ವಜನಿಕ ತಾಣಗಳ ಮೂಲಕ ಸಮಸ್ಯೆ ಆಲಿಸುತ್ತಿದ್ದಾರೆ.
ಹಾಗಾಗಿ ಸಾರ್ವಜನಿಕರು ತಮ್ಮ ಯಾವುದೇ ದೂರುಗಳಿದ್ದಲ್ಲಿ ಪೊಲೀಸ್ ವೆಬ್‌ಸೈಟ್ ಮುಖಾಂತರ ಅಂತರ್ಜಾಲದಲ್ಲಿ ತಮ್ಮ ಸಮಸ್ಯೆಯನ್ನು ತಿಳಿಸಬಹುದು. ಈ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ನಿಯಂತ್ರಣಾ ಕೊಠಡಿ(ಕಂಟ್ರೋಲ್ ರೂಂ) ಅಥವಾ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸುವುದು ಒಳಿತು.
ಈ ಸಮಸ್ಯೆಗಳಿಗೆ ಪೊಲೀಸರು ಸ್ಪಂಧಿಸುವುದಿಲ್ಲ ಎಂದು ಭಾವಿಸುವಂತಿಲ್ಲ. ಸಾರ್ವಜನಿಕ ತಾಣಗಳಲ್ಲಿ ಬರುವ ಇಂತಹ ಸಮಸ್ಯೆಗಳನ್ನು ಗಮನಿಸಲು ಪ್ರತ್ಯೇಕ ಸಿಬ್ಬಂದಿಗೆ ಸೂಚಿಸಲಾಗಿರುತ್ತದೆ. ಅಲ್ಲದೆ ಸಂಚಾರ ನಿಯಮ ಉಲ್ಲಂಘಿಸುವವರ ಫೋಟೊಗಳನ್ನು ಸಹ ತೆಗೆದು ಕಳುಹಿಸಲು ಇದರಲ್ಲಿ ಅವಕಾಶವಿದೆ. ಅದನ್ನು ಪಬ್ಲಿಕ್ ಐ ಎಂದು ಕರೆಯಲಾಗುತ್ತದೆ.
ಸಾಕಷು ್ಟಬಾರಿ ನೇರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ದೂರುಗಳನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತಾರೆ. ಆದರೂ ಸಮಸ್ಯೆ ಬಗೆಹರಿಯದಿದ್ದಲ್ಲಿ ನೀವು ನೇರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬಹುದು. ಹಾಗಾಗಿ ಪ್ರತಿಯೊಬ್ಬರೂ ಸಂಬಂಧಪಟ್ಟ ಪೊಲೀಸ್ ವೆಬ್‌ಸೈಟ್ ಬಳಸಿ ದೂರು ನೀಡಿ, ನಿಮಗಾಗಿ ಜಾರಿಗೆ ತಂದಿರುವ ಕೆಲವು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.