ಅಪರಾಧ ತಡೆ ಮಾಸ

ಡಿಸೆಂಬರ್ ಮಾಸವನ್ನು ಅಪರಾದ ತಡೆ ಮಾಸ ಎಂದು ಆಚರಿಸಲಾಗುತ್ತದೆ. ಆ ತಿಂಗಳಿನಲ್ಲಿ ಎಲ್ಲಾ ಪೊಲೀಸರು ಅಪರಾಧ ನಿಯಂತ್ರಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ.
ಉದ್ಯಾನಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ರಸ್ತೆಗಳಲ್ಲಿ, ದೇವಸ್ಥಾನದ ಮುಂಭಾಗ ಹೀಗೆ ಸಾರ್ವಜನಿಕರು ಹೆಚ್ಚು ಸಂಚರಿಸುವ ಸ್ಥಳದಲ್ಲಿ ಅಪರಾಧ ಕೃತ್ಯ ನಡೆಯದಂತೆ ಸಾರ್ವಜನಿಕರು ಹೇಗೆ ಎಚ್ಚರವಹಿಸಬೇಕು ಎಂಬ ಬಗ್ಗೆ ಬ್ಯಾನರ್ ಹಾಕಿರುತ್ತಾರೆ.
ಇಲ್ಲವಾದಲ್ಲಿ ಮನೆಗಳ್ಳತನ, ಸರ ಕಳವು, ಅಪಘಾತದಂತಹ ಕೃತ್ಯಗಳು ಹೇಗೆ ನಡೆಯುತ್ತವೆ, ಯಾವ ರೀತಿ ಎಚ್ಚರ ವಹಿಸಬೇಕು ಎಂಬ ಬಗ್ಗೆ ಅಲ್ಲಲ್ಲಿ ಬ್ಯಾನರ್ಗಳನ್ನು ಹಾಕಲಾಗಿರುತ್ತದೆ. ಜನರ ಆಸ್ತಿ, ಮಾನ, ಪ್ರಾಣ ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎಂಬುದನ್ನು ವಿವರಿಸಲಾಗಿರುತ್ತದೆ.
ಅಷ್ಟೇ ಅಲ್ಲ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದರೆ, ಹೆಣ್ಣು ಮಕ್ಕಳನ್ನು ಚುಡಾಯಿಸುವವರು, ಮುಗ್ಧರನ್ನು ಬೆದರಿಸಿ ಹಣ, ಆಭರಣ ದೋಚುವವರು ಸೇರಿದಂತೆ ಅಪರಾಧ ಕೃತ್ಯ ನಡೆದರೆ ಪೊಲೀಸರಿಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಮನವಿ ಮಾಡುತ್ತಾರೆ.
ಇದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಭರವಸೆಯನ್ನೂ ನೀಡುತ್ತಾರೆ.
ಒಂದು ವೇಳೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಭಯವಾದರೆ, ನಿಮಗೆ ತೊಂದರೆಯಾಗುತ್ತದೆ ಎನಿಸಿದರೆ ಸಂಬಂಧಪಟ್ಟ ಪೊಲೀಸ್ ಠಾಣೆಯ ದೂರವಾಣಿಗೆ ಕರೆ ಮಾಡಬಹುದು. ಆ ಸಂಖ್ಯೆ ತಿಳಿದಿಲ್ಲದಿದ್ದಲ್ಲಿ ಪೊಲೀಸ್ ನಿಯಂತ್ರಣಾ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಬಹುದು. ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಪೊಲೀಸರಿಗೆ ಮಾಹಿತಿ ನೀಡಬಹುದು.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


