ನಾಲಿಗೆ ನುಲಿ
ಹಸಿವು ಹಿಂಗಿಸಲು ಹಕ್ಕಿ ಹಾರುತ್ತಿತ್ತು; ಹರಿಗೋಲು ಹೊಳೆಯುತ್ತಿದ್ದ ಹೊಳೆಯಲ್ಲಿ ಹೊಯ್ದಾಡುತ್ತ ಹಾಯುತ್ತಿತ್ತು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಎದುರಿಗಿರುವ ಎಲ್ಲವನ್ನೂ ಧ್ವಂಸಮಾಡಬೇಕು
ಎನ್ನುವಂಥ ಉಗ್ರ ಸಿಟ್ಟು -
ಇಂಥ ಸಿಟ್ಟನ್ನು ಹೊಂದಿದವನ, ಎನ್ನುವ ಪದ -
ನಿದ್ದೆ ಮಾಡಲು ಮಲಗು ಎನ್ನುವುದಕ್ಕೆ
ಪರ್ಯಾಯ ಪದ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ನೀರಿನ ಬೇಡಿಕೆಗೆ ಬಾಯಾರಿಕೆ ಎನ್ನುತ್ತೇವೆ.
ಹಣದ ಬಾಯಾರಿಕೆಗೆ ಏನು? -
ಈ 'ನಗೆ' ಸುಳಿದಾಡುತ್ತಿರುವುದು ಬೆಳಗಿನ
ಜಾವದಲ್ಲಿ- ಅದೂ ಸ್ವಲ್ಪ. -
ಶೀಲ ಇರುವವನು ಶೀಲವಂತನಾದರೆ ದಾನ
ಮಾಡುವವನು ಏನು? -
ವೈರತ್ವದಲ್ಲಿ ಹೊಗೆಯಾಡುವ ದ್ವೇಷದ
'ಹೊಗೆ' ಕತ್ತರಿಸಿದರೆ ಇವ ಸಿಗತಾನ? -
ಗತಪ್ರತ್ಯಾಗತ
ಕತ್ತಲಿಗೆ ಇನ್ನೊಂದು ಹೆಸರು ಅಂಧಕಾರ, ತಿಮಿರ. ಈ ತಿಮಿರಕ್ಕೆ ಆದಿ, ಅಂತ್ಯ ಇದೆಯೇ ಎಂದು ನಮ್ಮನ್ನು ಯೋಚಿಸುವಂತೆ ಮಾಡುವ ಪದ- 'ತಿಮಿರಮಿತಿ'
ನಿನ್ನೆಯ ಉತ್ತರಗಳು:
3 ಅಕ್ಷರ: ಮಹೇಶ, ಹೇರಂಬ, ಶಬರಿ.
4 ಅಕ್ಷರ: ಬಲವಾನ, ಲಭ್ಯಲಾಭ, ವಾಲಾಡಿದ, ನಭದಲ್ಲಿ.
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141