ಬೈಟುಕಾಫಿ

ಒಂದಂಕಿ ಮರ!

ಒಂದಂಕಿ ಮರ!
Published On :

ಪಶ್ಚಿಮಘಟ್ಟದ ದಟ್ಟ ಕಾಡುಗಲ್ಲಿನ ಜೀವವೈವಿಧ್ಯತೆ ಬಗ್ಗೆ ಕೇಳಿದ್ದೇವೆ. ನಿಬ್ಬೆರರಗಾಗಿ ನೋಡುವಂಥ ನೂರಾರು ರಹಸ್ಯಗಳು ಆಗೊಮ್ಮೆ ಈಗೊಮ್ಮೆ ಗಮನ ಸೆಳೆಯುತ್ತಲೇ ಇರುತ್ತವೆ. ಈ ನಿಗೂಢಗಳಲ್ಲಿ 'ಕನ್ನಡನ'ವೂ ಬೆರೆತುಕೊಂಡಿದೆ ಎಂದರೆ ಬಹುಶಃ ನಿಮಗೆ ನಂಬಿಕೆ ಹುಟ್ಟುವುದಿಲ್ಲ. ಅದಕ್ಕಾಗಿಯೇ ಈ ಚಿತ್ರಗಳನ್ನು ನೋಡಿ. ಇದು ಕನ್ನಡದ '1' ಅಂಕಿಯನ್ನು ಹೋಲುವ ಬೇರುಗಳು. ಪಶ್ಚಿಮಘಟ್ಟವೆಂಬ ಸಸ್ಯಕಾಶಿಯಲ್ಲಿ ಈ ಅಂಕಿ ಎಂದೂ ಬದಲಾಗಿ ಎರಡಾಗದು, ಮೂರಾಗದು. ಅಂದಹಾಗೆ, ಇದು ರಾಮ ಪತ್ರೆ ಕುಟುಂಬಕ್ಕೆ ಸೇರಿದ ಮರ. ಡೈನೋಸರ್‌ಗಳ ಯುಗದಲ್ಲಿ ಈ ಮರವೂ ಜನ್ಮತಾಳಿತು ಎನ್ನುವುದು ಪರಿಸರವಾದಿಗಳ ಒಮ್ಮತದ ಅಭಿಪ್ರಾಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸನಿಹದ ಕತ್ತಲ ಕಾನನದಲ್ಲಿ ಇಂಥ ಒಂದಂಕಿ ಮರಗಳು ಅಪರೂಪ ಎನ್ನುವಂತಿವೆ.   ನೀರಿನ ಮೂಲಗಳ ಸಮೀಪದಲ್ಲೇ ಈ ಮರ ಬೆಳೆಯುವುದು ಇನ್ನೊಂದು ವಿಶೇಷ. ಮಣ್ಣಿನ ಸವಕಳಿ ತಡೆಯುವ ಮರಗಳಲ್ಲಿ ಇದೂ ಒಂದು. ಅಲ್ಲದೆ, ಮಳೆಯ ನೀರನ್ನು ಹಿಡಿದುಕೊಂಡು ಬೇಸಿಗೆಯಲ್ಲಿ ಬಿಡುವ ಸ್ಪಂಜಿನ ಕೆಲಸವನ್ನೂ ಇವು ನಿರ್ವಹಿಸುತ್ತವೆ. ಈ ಭಾಗದ ಹವ್ಯಕರು ಇದಕ್ಕೆ ಪೂಜನೀಯ ಸ್ಥಾನ ಕಲ್ಪಿಸಿ, ಆರಾಧಿಸುತ್ತಾರೆ. ಉಭಯವಾಸಿ ಜಲಚರಗಳಿಗೆ ಈ ಮರ ಆಶ್ರಯ ಒದಗಿಸುತ್ತದೆ.
ಬೇರಿಗೆ ಗಾಳಿ ಲಭಿಸುವ ಸಲುವಾಗಿ ಇವು ಒಂದಂಕಿಯಂತೆ ಬೆಳೆಯುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಇದನ್ನು ವೈಜ್ಞಾನಿಕ ಬಾಷೆಯಲ್ಲಿ 'ಜಿಮ್ನಾಕಾಂತಿಯ ಕೆನರಿಕಾ' ಅಂತಾರೆ.

-  ಚಿತ್ರ, ಲೇಖನ:
     ಅಚ್ಯುತಕುಮಾರ ಯಲ್ಲಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.