ಬೈಟುಕಾಫಿ

ಪಾಠ (ಸಣ್ಸ್ಟೋರಿ)

Published On :




ಒಬ್ಬ ರಾಜನಿದ್ದ. ಬಂಗಾರ ಎಂದರೆ ಭಾರಿ ಆಸೆ. ಆತನ ಭಂಡಾರದಲ್ಲಿ ಸಿಕ್ಕಾಪಟ್ಟೆ ಚಿನ್ನ, ರತ್ನಗಳಿದ್ದವು. ದಿನವೂ ಮತ್ತಷ್ಟು ಬಂದು ಸೇರುತ್ತಿದ್ದವು. ರಾಜ ಅವುಗಳನ್ನು ಎಣಿಸುವುದರಲ್ಲೇ ಇಡೀ ದಿನ ಕಳೆಯುತ್ತಿದ್ದ. ಒಂದು ದಿನ ಹೀಗೇ ಎಣಿಸುತ್ತಿರುವಾಗ ಆಗುಂತಕನೊಬ್ಬ ಬಂದ. ಆತನ ನಮಸ್ಕಾರದಿಂದ ಖುಷಿಗೊಂಡ ರಾಜ ಹೇಳಿದ, 'ಬಂಗಾರ ಎಂದರೆ ನನಗೆ ಭಾರಿ ಪ್ರೀತಿ. ನಾನು ಮುಟ್ಟಿದ್ದೆಲ್ಲ ಬಂಗಾರವಾಗಬೇಕು.' 'ನಾಳೆ ಮುಂಜಾನೆಯಿಂದ ನೀನು ನೋಡುವ ಸೂರ್ಯ ಕಿರಣವೂ ಬಂಗಾರದ್ದಾಗಿರುತ್ತದೆ' ಎಂದ ಆಗುಂತಕ ಮರೆಯಾದ. ರಾಜ ಸುಮ್ಮನೆನಕ್ಕ.
ಬೆಳಗಾಯಿತು. ಎದ್ದವನಿಗೆ ಏನಾಶ್ಚರ್ಯ! ಹಾಸಿಗೆ, ಹೊದಿಕೆ ಎಲ್ಲ ಬಂಗಾರಮಯ. ಉದ್ಯಾನದಲ್ಲಿ ಆಡುತ್ತಿದ್ದ ಮಗಳಿಗೆ ಸರ್ಪ್ರೈಸ್ ಕೊಡಬೇಕೆನಿಸಿತು. ಅತ್ತ ಹೊರಟವ ಮನಸ್ಸು ಬದಲಿಸಿ ಏನಾದರೂ ಓದೋಣ ಎಂದುಕೊಂಡು ಪುಸ್ತಕ ಕೈಗೆತ್ತಿಕೊಂಡ. ಅದು ಬಂಗಾರದ್ದಾಗಿ ಮಾರ್ಪಟ್ಟಿತು. ತಿಂಡಿ ತಿನ್ನೋಣವೆಂದು ಹೋದರೆ ಅದೆಲ್ಲವೂ ಬಂಗಾರದ್ದಾಗಿಬಿಡಬೇಕೆ? ಅಷ್ಟರಲ್ಲಿ ಆಟವಾಡುತ್ತಿದ್ದ ಮಗಳು ಬಂದು ಅಪ್ಪಿಕೊಂಡಳು. ಮರುಕ್ಷಣವೇ ಬಂಗಾರದ ಪ್ರತಿಮೆಯಾದಳು.
ರಾಜ ಕಂಗಾಲಾದ. ಜೋರಾಗಿ ಅಳತೊಡಗಿದ. ಮತ್ತೆ ಪ್ರತ್ಯಕ್ಷನಾದ ಆಗುಂತಕ, 'ರಾಜಾ ಏಕೆ ಅಳುತ್ತಿರುವೆ? ನೀನು ಮುಟ್ಟಿದ್ದೆಲ್ಲ ಬಂಗಾರವಾಗುತ್ತಿದೆಯಲ್ಲ. ಖುಷಿಪಡು' ಎಂದ. 'ಇಲ್ಲ, ನನಗೆ ಬಂಗಾರ ಬೇಡ. ಮಗಳು ಬೇಕು. ನನ್ನ ತಪ್ಪು ಮನ್ನಿಸಿ' ಎಂದು ಬೇಡಿಕೊಂಡ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. 'ಇನ್ನಾದರೂ ಬುದ್ಧಿ ಕಲಿತು ಪ್ರಜೆಗಳ ಯೋಗಕ್ಷೇವುದ ಬಗ್ಗೆ ಗಮನ ಕೊಡು' ಎಂದು ಬುದ್ಧಿಮಾತು ಹೇಳಿದ ಆಗುಂತಕ ಎಲ್ಲವನ್ನೂ ಮೊದಲಿನಂತೆ ಮಾಡಿದ. ಅಂದು ಕಲಿತ ಪಾಠವನ್ನು ರಾಜ ಎಂದಿಗೂ ಮರೆಯಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.