ಬೈಟುಕಾಫಿ

ಶುಕ್ರ ಸಂಕ್ರಮಣ (ಜನರಲ್ ಸ್ಟೋರ್)

Published On :

ಶುಕ್ರ ಸಂಕ್ರಮಣ ಎಂದರೆ ಏನು, ಅದು ಉಂಟಾಗಲು ಕಾರಣಗಳೇನು ಎಂಬುದು ನಿಮಗೆ ತಿಳಿದಿದೆಯೇ? ಶುಕ್ರ ಒಂದು ನಕ್ಷತ್ರ ಅಲ್ಲ, ಅದೊಂದು ಗ್ರಹ. ಇದನ್ನು ಸಾಮಾನ್ಯವಾಗಿ ಬೆಳ್ಳಿಚುಕ್ಕಿ ಎನ್ನುತ್ತಾರೆ. 2004 ಜೂನ್ 8ರಂದು ಸೂರ್ಯನ ಮೇಲೆ ಒಂದು ಚುಕ್ಕಿ ಮೂಡಿ ಮಾಯವಾಗಿದ್ದನ್ನು ನೀವು ಕೇಳಿರಬಹುದು. ಅದನ್ನೇ ನಾವು ಶುಕ್ರ ಸಂಕ್ರಮಣ ಎನ್ನುವುದು. ಹೀಗೆ ಉಂಟಾಗಲು ಕಾರಣವಿದೆ. 130 ವರ್ಷಗಳ ಹಿಂದೆ ಸೂರ್ಯ, ಶುಕ್ರ ಮತ್ತು ಭೂಮಿ ಒಂದೇ ಸರಳ
ರೇಖೆಯಲ್ಲಿ ಬಂದಿದ್ದವು. ಇವುಗಳ ಪರಿಭ್ರಮಣ ಕಾಲವನ್ನು ಲೆಕ್ಕಹಾಕಿದರೆ 584 ದಿನಗಳಿಗೊಮ್ಮೆ ಶುಕ್ರ ಸಂಕ್ರಮಣ ನಡೆಯಬೇಕು. ಹಾಗೆ ಆಗುವುದಿಲ್ಲ. ಇದಕ್ಕೆ ಕಾರಣ ಶುಕ್ರನ ಕಕ್ಷೆ ತಳ ಮತ್ತು ಭೂಮಿಯ ಕಕ್ಷೆ ತಳ ಕೇವಲ 3-4 ಡಿಗ್ರಿಯಷ್ಟು ಓರೆ ಆಗಿವೆ. ಈ ಕೋನ ಚಿಕ್ಕದಾದರೂ, ಅವು ಒಂದೇ ಸರಳರೇಖೆಯಲ್ಲಿ ಬರದಂತೆ ಆಗುತ್ತದೆ. ಈ ಎರಡೂ ಕಕ್ಷೆಗಳ ತಳಗಳು ಒಂದನ್ನೊಂದು ಹಾಯುವ ಪರ್ವರೇಖೆ ಎಂಬುದರ ಮೇಲೆ ಭೂಮಿ ಮತ್ತು ಶುಕ್ರ ಇದ್ದರೆ ಮಾತ್ರ ಸಂಕ್ರಮಣ ಉಂಟಾಗುತ್ತದೆ. ಇದು ಜೂನ್ ಮತ್ತು ಡಿಸೆಂಬರ್‌ನಲ್ಲಿ ಮಾತ್ರ ಸಾಧ್ಯ. ಹೀಗಾಗಿ ಸಂಕ್ರಮಣಗಳು ನಿರ್ದಿಷ್ಟ ದಿನಾಂಕಗಳಂದು ನಡೆಯುತ್ತವೆ. ಭೂಮಿಯ ಮೇಲೆ ಇರುವವರಿಗೆ, ಸೂರ್ಯನ ಬಿಲ್ಲೆಯ ಮೇಲೆ ಒಂದು ಕಪ್ಪು ಚುಕ್ಕೆ ಹಾದುಹೋದಂತೆ ಕಾಣುತ್ತದೆ. ಇದು ಗ್ರಹಣವಾದರೂ ಶುಕ್ರ ಗ್ರಹಣ ಎನ್ನುವುದಿಲ್ಲ, ಇದಕ್ಕೆ ಶುಕ್ರ ಸಂಕ್ರಮಣ ಎನ್ನುತ್ತೇವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.