ಸೇವೆಗೆ ಸಲಾಂ

ಸೇವೆಗೆ ಸಲಾಂ
Updated on: 

ಹುಟ್ಟು ಉಚಿತ, ಸಾವು ಖಚಿತ; ಆದರೆ ಇದೆರಡಕ್ಕೂ ಪಕ್ಕನೆ ವಾಹನ ವ್ಯವಸ್ಥೆ ಸಿಗುವುದು ದುರ್ಲಭ. ಇಲ್ಲಿಬ್ಬರಿದ್ದಾರೆ ನೋಡಿ: ಅದನ್ನು ಉಚಿತವಾಗಿ ನೀಡುವವರು.
ಗರ್ಭಿಣಿಯರಿಗೆ ಹೆರಿಗೆ ಆಸ್ಪತ್ರೆಗೆ ಕೊಂಡೊಯ್ಯಲು ಪಾಣೆಮಂಗಳೂರು ಮೆಲ್ಕಾರ್ ರಫೀಕ್ ತಮ್ಮ ರಿಕ್ಷಾದಲ್ಲಿ ಉಚಿತವಾಗಿ ಕರೆದೊಯ್ಯುತ್ತಾರೆ. ಅಸ್ಪತ್ರೆಯಿಂದ ಶವ ಸಾಗಿಸಲು ಮಂಗಳೂರಿನ ಎಮ್ಮೆಕೆರೆ ಸಲಾಂ ಉಚಿತವಾಗಿ ತಮ್ಮ ಅ್ಯಂಬುಲೆನ್ಸ್ ನೀಡುತ್ತಿದ್ದಾರೆ.
ಪಾಣೆಮಂಗಳೂರಿನ ರಫೀಕ್ ರಿಕ್ಷಾ ಚಲಾಯಿಸಿ ಜೀವನ ಸಾಗಿಸುತ್ತಾರೆ. ಸಂಕಷ್ಟಕ್ಕೆ ಸ್ಪಂದಿಸುವ ಗುಣ ಉಳ್ಳವರು. ತಮ್ಮ ರಿಕ್ಷಾದಲ್ಲಿ ಗರ್ಭಿಣಿಯರನ್ನು ಹೆರಿಗೆ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯುತ್ತಾರೆ. ಈ ಬಗ್ಗೆ ತಮ್ಮ ರಿಕ್ಷಾ ಹಿಂಬದಿ ಮೊಬೈಲ್ ನಂಬರ್ (9740549336)ಕೂಡಾ ಬರೆದಿದ್ದಾರೆ. ಆದರೆ ಗರಿಷ್ಠ ದೂರ 15 ಕಿ.ಮೀ. ಈ ಹಿಂದೆ ರೋಗಿಗಳಿಗೆ ಕಡಿಮೆ ಬಾಡಿಗೆಗೆ ಒಯ್ಯುತ್ತಿದ್ದೆ ಎನ್ನುತ್ತಾರೆ.
 32 ವರ್ಷದ ರಫೀಕ್ ಅಕ್ಷರಸ್ಥರಲ್ಲ. 5ನೇ ತರಗತಿಯಲ್ಲಿರುವಾಗಲೇ ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. 18 ವರ್ಷ ಕೆಲಸ ಮಾಡಿದ ಬಳಿಕ ಆಟೋ ರಿಕ್ಷಾ ಬಾಡಿಗೆ ಆರಂಭಿಸಿದರು.
ರೌಡಿಸಂ ಬಿಟ್ಟ ಸಲಾಂ
15 ವರ್ಷದ ಹಿಂದೆ ರೌಡಿ ಲೇಬಲ್ ಬಿಟ್ಟು ವೆನ್ಲಾಕ್ ಶುಚಿತ್ವ ಗುತ್ತಿಗೆ ಕೆಲಸ ನಡೆಸುತ್ತಿರುವ ಎಮ್ಮೆಕೆರೆ ಸಲಾಂ ಬಡವರ ಮೃತದೇಹ ಸಾಗಾಟಕ್ಕೆ ಆ್ಯಂಬುಲೆನ್ಸ್ ಉಚಿತವಾಗಿ ನೀಡುತ್ತಿದ್ದಾರೆ. 8 ತಿಂಗಳ ಹಿಂದೆ ಸೇವೆ ಶುರು ಮಾಡಿದ ಸಲಾಂ 20 ಕಿ.ಮೀ. ವರೆಗೆ ಉಚಿತ ಸೇವೆ ನೀಡುತ್ತಾರೆ. ಕಡು ಬಡವರಾದರೆ ಅನಾರೋಗ್ಯ ಪೀಡಿತರನ್ನೂ ಉಚಿತವಾಗಿ ಕರೆದೊಯ್ದು ಬಿಡುತ್ತಾರೆ.
ಎಮ್ಮೆಕೆರೆ ಸಲಾಂ ವಿರುದ್ಧ ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಪ್ರಕರಣ ದಾಖಲಾಗಿತ್ತು. ಖುಲಾಸೆಯಾಗಿ ಹತ್ತು ವರ್ಷ ಕಳೆದಿದೆ. ಈಗ ಆಸ್ಪತ್ರೆ ಶುಚಿತ್ವ ಗುತ್ತಿಗೆ, ಖಾಸಗಿ ಬಸ್, ಆ್ಯಂಬುಲೆನ್ಸ್ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. 'ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ರೋಗಿಗಳ ನೋವು ನಲಿವುಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಕಡು ಬಡವರೇ ಇಲ್ಲಿಗೆ ಬರುತ್ತಾರೆ. ಕೆಲವರಿಗೆ ಚಿಕಿತ್ಸೆ ಮುಗಿಸಿ ವಾಪಸ್ ಹೋಗಲು ಹಣ ಇರಲ್ಲ. ಮೃತದೇಹ ಕೊಂಡೊಯ್ಯಲು 1 ಸಾವಿರ, 2 ಸಾವಿರ ಕೇಳುತ್ತಾರೆ. ನನಗೆ ದೇವರು ಶಕ್ತಿ ಕೊಟ್ಟಿದ್ದಾನೆ ಹೀಗಾಗಿ ನೆರವು ನೀಡಲು ಮನಸ್ಸು ಮಾಡಿದೆ' ಎನ್ನುತ್ತಾರೆ ಸಲಾಂ. <

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com