ಬೈಟುಕಾಫಿ

ಬೆರಳುಗಳ ಹಬ್ಬ

Published On :

ಒಮ್ಮೆ ಮನುಷ್ಯನ ಕೈಬೆರಳುಗಳು ಯೋಚಿಸಿದವು. ನಾವೇಕೆ ಮಾಡಬಾರದು ಹಬ್ಬ!
ಕಿರುಬೆರಳು ಖುಷಿಯಿಂದ ಕಿರುಚಿತು, 'ಹಬ್ಬ! ಹಬ್ಬ! ನಾವೆಲ್ಲ ಮಾಡೋಣ ಹಬ್ಬ' ಅದಕ್ಕೆ ಉಂಗುರದ ಬೆರಳೆಂದಿತು, 'ಹಬ್ಬವೆಂದರೆ ತಮಾಷೆಯಲ್ಲ, ಮನೆಯಲ್ಲಿಲ್ಲ ಒಂದು ಕಾಳು ಅಕ್ಕಿ, ಬೇಳೆ, ಬೆಲ್ಲ. ಅಲ್ಲದೆ ವಸ್ತುಗಳ ಬೆಲೆ ಗಗನಕ್ಕೇರಿವೆಯಲ್ಲ. ಹೇಗೆ ಮಾಡುವುದು ಹಬ್ಬ' ಎಂದು ಪ್ರಶ್ನಿಸಿತು.

ಮಧ್ಯದ ಬೆರಳು ಸುಮ್ಮನಿದ್ದೀತೆ? 'ಅಯ್ಯೋ ಏಕೆ ಯೋಚಿಸುತ್ತೀರಿ? 'ಸಾಲ ಮಾಡಿಯಾದರೂ ತುಪ್ಪ ತಿನ್ನಿ' ಎಂಬ ಗಾದೆಯನ್ನು ಕೇಳಿಲ್ಲವೆ? ಮಾಡೋಣ ಸಾಲ, ಆಚರಿಸೋಣ ಹಬ್ಬ.
ತೋರು ಬೆರಳೆಂದಿತು, 'ಸಾಲ ಮಾಡುವುದೇನೋ ಸರಿ, ಆಮೇಲೆ ಸಾಲವನ್ನು ತೀರಿಸುವವರು ಯಾರ್ರೀ? ಸಾಲ ಆಗಬಾರದು ನಮ್ಮೆಲ್ಲರ ಪಾಲಿನ ಶೂಲ.'

ಇದುವರೆಗೂ ಸುಮ್ಮನಿದ್ದ ಹೆಬ್ಬೆರಳು 'ಸಾಲದ ಯೋಚನೆ ನನಗೆ ಬಿಡಿ. ಹಬ್ಬದ ಕಡೆ ಗಮನ ಕೊಡಿ. ನನ್ನನ್ನೇ ಅಡವಿಟ್ಟು ಪಡೆಯುತ್ತೇನೆ ಸಾಲ. ಅದೃಷ್ಟವಿದ್ದರೆ ಸಾಲ ಆಗಬಹುದು ಮನ್ನಾ! ಆಗದಿದ್ದರೆ ಚಿಂತೆಯಿಲ್ಲ, ಸಾಲ ತೀರಿಸಲು ನಾನಿದ್ದೇನಲ್ಲ ಹೆಬ್ಬೆಟ್ಟಿನ ರಾಮ, ಬಲಭೀಮ' ಎಂದಾಗ, ಉಳಿದ ಬೆರಳುಗಳು ಸಮ್ಮತಿಸಿದವು.

ತಂದವು ಸಾಲ. ಕೊಂಡವು ಹಬ್ಬಕ್ಕೆ ಹೊಸ ಬಟ್ಟೆ, ಅಕ್ಕಿ ಬೇಳೆ, ಬೆಲ್ಲ. ತಯಾರಿಸಿದವು ವಿಧವಿಧದ ಭಕ್ಷ್ಯಗಳನ್ನು. ಎಲ್ಲವೂ ಸೇರಿ ತಿಂದು, ಉಂಡು, ತೇಗಿ ಸಂಭ್ರಮಿಸಿ ಆಚರಿಸಿದವು ಹಬ್ಬವ ದಿನವೆಲ್ಲಾ.
- ಎಚ್.ಎಸ್. ಸಿದ್ದಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.