ಬೈಟುಕಾಫಿ

ಶ್ರೀ ರಾಮಕೃಷ್ಣರ ಅದ್ವೈತ ಸಾಕ್ಷಾತ್ಕಾರ!

Published On :

ಗಂಟಲು ಹುಣ್ಣಿನ ತೀವ್ರತೆಯಿಂದ ರಾಮಕೃಷ್ಣರ ಶರೀರಶಕ್ತಿ ಕುಂದುತ್ತಿದ್ದರೂ ಅವರ ದೈವಿಕತೆ ಮಾತ್ರ ಇನ್ನಷ್ಟು ಹೆಚ್ಚಾಗಿ ಪ್ರಕಟವಾಗುತ್ತಿತ್ತು. ಇದು ಭಕ್ತರಲ್ಲಿ ಹೊಸ ಉತ್ಸಾಹವನ್ನು ತುಂಬುತ್ತಿತ್ತು. ರೋಗದ ತೀವ್ರತೆಯನ್ನು ಕಂಡ ಪಂಡಿತನೊಬ್ಬ 'ಮಹಾಶಯರೇ, ನಿಮ್ಮಂತಹ ಮಹಾತ್ಮರು ಇಂತಹ ಕಾಯಿಲೆಗಳನ್ನೆಲ್ಲ ಕೇವಲ ಇಚ್ಛಾಮಾತ್ರದಿಂದ ವಾಸಿ ಮಾಡಿಕೊಳ್ಳಬಹುದು. ನೀವೇಕೆ ಹಾಗೆ ಮಾಡಲೊಲ್ಲಿರಿ?'
ಆಗ ರಾಮಕೃಷ್ಣರು 'ನಾನು ನನ್ನ ಮನಸ್ಸನ್ನು ಒಮ್ಮೆ ಭಗವಂತನಿಗೆ ಕೊಟ್ಟುಬಿಟ್ಟಾಗಿದೆ. ಈಗ ಆ ಮನಸ್ಸನ್ನು ಹಿಂದೆಗೆದುಕೊಂಡು, ಮತ್ತೆ ಅದನ್ನು ಈ ಕೊಳೆತು ನಾರುವ ರಕ್ತಮಾಂಸಗಳ ಗೂಡಿನ ಮೇಲಿಡಲೇ?' ಎಂದರು. ಇದನ್ನು ಕೇಳಿ ನರೇಂದ್ರ, 'ಕಾಯಿಲೆಯನ್ನು ಗುಣಪಡಿಸುವಂತೆ ಜಗನ್ಮಾತೆಯನ್ನೇ ಕೇಳಿಕೊಳ್ಳಿ. ಅವಳು ನಿಮ್ಮ ಪ್ರಾರ್ಥನೆಯನ್ನು ಕೇಳದಿರಲು ಸಾಧ್ಯವೇ ಇಲ್ಲ' ಎಂದ. ಅದಕ್ಕೊಪ್ಪದ ರಾಮಕೃಷ್ಣರು ಕೊನೆಗೆ ಪ್ರಿಯಶಿಷ್ಯನ ಒತ್ತಾಯಕ್ಕೆ ಕಟ್ಟುಬಿದ್ದು ಒಪ್ಪಿಕೊಂಡರು.
ಒಂದೆರಡು ಗಂಟೆಗಳ ತರುವಾಯ ಶಿಷ್ಯರು 'ಜಗನ್ಮಾತೆ ಏನು ಹೇಳಿದಳು?' ಎಂದು ರಾಮಕೃಷ್ಣರನ್ನು ಕೇಳಲು, 'ಜಗನ್ಮಾತೆಗೆ ನನ್ನ ಗಂಟಲನ್ನು ತೋರಿಸಿ, ಈ ಕಾಯಿಲೆ ದೆಸೆಯಿಂದ ಏನನ್ನೂ ತಿನ್ನುವುದಕ್ಕೆ ಸಾಧ್ಯವಾಗುತ್ತಿಲ್ಲ, ಸ್ವಲ್ಪ ಆಹಾರ ತೆಗೆದುಕೊಳ್ಳುವುದಕ್ಕಾದರೂ ಅನುಕೂಲ ಮಾಡಿಕೊಡು ಎಂದೆ. ಆದರೆ ಆಕೆ 'ನೀನು ಅಷ್ಟೊಂದು ಬಾಯಿಗಳ ಮೂಲಕ ಈಗ ತಿನ್ನುತ್ತಿಲ್ಲವೆ?' ಅಂತ ಕೇಳಿಬಿಟ್ಟಳು' ಎಂದರು.
ಇದನ್ನು ಕೇಳಿ ನರೇಂದ್ರನ ಬಾಯಿ ಕಟ್ಟಿಹೋಯಿತು.ಕಿಂಚಿತ್ತೂ ದೇಹಬುದ್ಧಿಯಾಗಲಿ, ಸ್ವಾರ್ಥತೆಯಾಗಲಿ ಇಲ್ಲದ ಅದ್ಭುತ ಸ್ಥಿತಿ ಇದು! ನಿಜವಾದ ಅದ್ವೈತಭಾವವೆಂದರೆ ಇದೇ ಅಲ್ಲವೆ?

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.