ಬೈಟುಕಾಫಿ

ಫಾಲ್ಸ್ Road

ಕೊಡಗು ಜಿಲ್ಲೆಯಲ್ಲಿ ಮುಂಗಾರು ಬಿರುಸು ಪಡೆಯುತ್ತಿರುವಂತೆಯೇ ಕರಿಕೆ ವ್ಯಾಪ್ತಿಯ ಜಲಧಾರೆಗಳು ಮೈತುಂಬಿಕೊಂಡಿವೆ.

ಫಾಲ್ಸ್ Road
Published On :

ಕೊಡಗು ಜಿಲ್ಲೆಯಲ್ಲಿ ಮುಂಗಾರು ಬಿರುಸು ಪಡೆಯುತ್ತಿರುವಂತೆಯೇ ಕರಿಕೆ ವ್ಯಾಪ್ತಿಯ ಜಲಧಾರೆಗಳು ಮೈತುಂಬಿಕೊಂಡಿವೆ. ಭಾಗಮಂಡಲದಿಂದ ಕರಿಕೆ ಮಾರ್ಗದಲ್ಲಿ ಈ ಜಲಧಾರೆಗಳಿದ್ದು, ಇದರ ಸೌಂದರ್ಯ ಎಂಥವರನ್ನಾದರೂ ಮಂತ್ರಮುಗ್ಧರನ್ನಾಗಿಸುತ್ತದೆ. ಇದನ್ನು ಕರೆಯುವುದೇ 'ಜಲಪಾತ ಮಾರ್ಗ' ಎಂದು. ಇಲ್ಲಿ ಒಂದೆರಡಲ್ಲ, 34 ಜಲಪಾತಗಳಿವೆ!
ತಲಕಾವೇರಿ ವನ್ಯಜೀವಿ ವಲಯದ ದಟ್ಟ ಕಾಡಿನ ಮಧ್ಯದ ಜಲಪಾತಗಳಲ್ಲಿ ಕೆಲವು ವರ್ಷಪೂರ್ತಿ ಧುಮ್ಮಿಕ್ಕುತ್ತಿದ್ದರೆ, ಬಹುತೇಕ 'ಜಲಬೆಡಗಿಯರು' ಮಳೆಗಾಲದ ಅತಿಥಿಗಳು. ಮಳೆಗಾಲ ಆರಂಭವಾಗುತ್ತಿರುವಂತೆ ಹಸಿರ ರಾಶಿಯ ನಡುವೆ ಪ್ರತ್ಯಕ್ಷವಾಗುವ ಇವರು ತಮ್ಮ ಸೌಂದರ್ಯ ಪ್ರದರ್ಶಿಸುತ್ತಾರೆ. ಮಳೆಗಾಲದ 3-4 ತಿಂಗಳು ತಣ್ಣಿಮಾನಿಯಿಂದ ಆರಂಭಗೊಂಡು ಕರಿಕೆಯವರಿಗೆ ನೋಡುಗರ ಕಣ್ಣಿಗೆ ರಸದೌತಣ ನೀಡುತ್ತವೆ.

ಅನಾಮಿಕರು
ಕೆಲವು ಜಲಧಾರೆಗಳು ದೊಡ್ಡವು; 20 ಜಲಪಾತಗಳು ಸಣ್ಣಗಿದ್ದರೂ ಮಳೆವೈಭದಿಂದ ಮನ ಸೆಳೆಯುತ್ತಿವೆ. ಈ ನೈಸರ್ಗಿಕ ಜಲಧಾರೆಗಳಿಗೆ ಯಾವುದೇ ಹೆಸರಿಲ್ಲ. 'ಕರಿಕೆ ಜಲಪಾತ'ಗಳೆಂದೇ ಸ್ಥಳೀಯರಿಂದ ಕರೆಯಲ್ಪಡುವ ಜಲಪಾತ ವೀಕ್ಷಿಸಲು ಕೇರಳದಿಂದಲೂ ಪ್ರವಾಸಿಗರು ಬರುತ್ತಾರೆ.

-ಅನಿಲ್ ಎಚ್.ಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.