ಬೈಟುಕಾಫಿ

ಯಾರ ಕೆಲಸ ಏನು?

Published On :

ನಗರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಠಾಣೆಯ ಅಧಿಕಾರಿ ಅವರನ್ನು ಠಾಣಾಧಿಕಾರಿ ಎನ್ನಲಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ನ್ನು ಠಾಣಾಧಿಕಾರಿ ಎನ್ನಲಾಗುತ್ತದೆ. ಒಂದು ಠಾಣೆಯಲ್ಲಿ ಅಲ್ಲಿನ ಅಪರಾಧ, ಪ್ರದೇಶಕ್ಕನುಗುಣವಾಗಿ ಸಿಬ್ಬಂದಿ ನೇಮಿಸಲಾಗುತ್ತದೆ. ಕೆಲ ಠಾಣೆಗಳಲ್ಲಿ ನೂರು ಪೊಲೀಸ್ ಸಿಬ್ಬಂದಿಯೂ ಇರುತ್ತಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ಎಲ್ಲಾ ಆಗುಹೋಗುಗಳ ಬಗ್ಗೆ ಗಮನಹರಿಸುತ್ತಾರೆ. ಅವರಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳು ಭಾಗಗಳನ್ನಾಗಿ ಮಾಡಿಕೊಂಡಿರುತ್ತಾರೆ. ಒಬ್ಬರು ಅಥವಾ ಇಬ್ಬರು ಅಪರಾಧ ಹಾಗೂ ಉಳಿದ ಪಿಎಸ್‌ಐ ಕಾನೂನು ಸುವ್ಯವಸ್ಥೆ ಬಗ್ಗೆ ಗಮನಹರಿಸುತ್ತಾರೆ. ಕೆಲವು ಠಾಣೆಗಳಲ್ಲಿ ಹಾಗಾಗುವುದಿಲ್ಲ. ಮೊದಲು ಬರುವ ದೂರನ್ನು ಒಬ್ಬ ಪಿಎಸ್‌ಐ ಗಮನಿಸಿದರೆ ನಂತರ ಬರುವ ಮತ್ತೊಂದು ಪ್ರಕರಣವನ್ನು ಮತ್ತೊಬ್ಬ ಪಿಎಸ್‌ಐ ಗಮನಿಸುತ್ತಾರೆ. ಹೀಗೆ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚಿರುವ ಪಿಎಸ್‌ಐಗಳು ಕ್ರಮವಾಗಿ ಪ್ರಕರಣದ ತನಿಖೆ ನಡೆಸುತ್ತಾರೆ. ಅವರ ಕೈಕೆಳಗೆ ಉಳಿದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಅವರನ್ನೂ ಅಪರಾಧ, ಕಾನೂನು ಸುವ್ಯವಸ್ಥೆ ವಿಭಾಗ ಎಂದು ವಿಂಗಡಿಸಿರುತ್ತಾರೆ.
ನಿಗದಿಪಡಿಸಿದ ವಿಭಾಗದ ಸಿಬ್ಬಂದಿ ಮಾತ್ರ ಅವರಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಗಮನಹರಿಸುತ್ತಾರೆ. ಪಿಎಸ್‌ಐ ರಜೆ ಇದ್ದಲ್ಲಿ ಎಎಸ್‌ಐ ದೂರು ದಾಖಲಿಸಿಕೊಂಡು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ತನಿಖೆಯನ್ನೂ ಅದೇ ವಿಭಾಗದ ಸಿಬ್ಬಂದಿ ಮಾಡುತ್ತಾರೆ. ಆರೋಪಿಯನ್ನು ಬಂಧಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದು ಅವರ ಜವಾಬ್ದಾರಿ.

ಆಯಾ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೇರೆ ಸಿಬ್ಬಂದಿ ಗಮನಹರಿಸುತ್ತಾರೆ.


-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.