ದಿನಚರಿ ಕಡ್ಡಾಯ
ಶಾಲೆಯಲ್ಲಿ ಮಕ್ಕಳ ಹಾಜರಾತಿಯನ್ನು ಶಿಕ್ಷಕರು ಗಮನಿಸುತ್ತಾರೆ. ಅದೇ ರೀತಿ ಪ್ರತಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸಿಬ್ಬಂದಿ ರಜೆ, ದಿನನಿತ್ಯದ ಕೆಲಸಗಳ ಬಗ್ಗೆ ಗಮನಿಸುತ್ತಾರೆ.
ಅಷ್ಟೇ ಅಲ್ಲದೆ ಆಯಾ ವಿಭಾಗ ಹಾಗೂ ಉಪವಿಭಾಗದ ಹಿರಿಯ ಅಧಿಕಾರಿಗಳಾದ ಡಿಸಿಪಿ ಹಾಗೂ ಎಸಿಪಿ ತಮ್ಮ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಮಾಡಿರುವ ಕೆಲಸವೇನು, ದಿನನಿತ್ಯ ಯಾವ ಕೆಲಸ ಮಾಡುತ್ತಾರೆ ಎಂಬಿತ್ಯಾದಿ ವಿವರಗಳನ್ನು ಪ್ರತಿನಿತ್ಯ ಗಮನಿಸುತ್ತಾರೆ.
ಅದನ್ನು ಗಮನಿಸಲು ಪ್ರತಿ ಪೊಲೀಸ್ ಠಾಣೆಗೆ ಹೋಗುವುದಿಲ್ಲ. ಬದಲಾಗಿ ಪ್ರತಿ ಠಾಣೆಯಲ್ಲೂ ಪೊಲೀಸರು ಒಂದು ದಿನಚರಿ ಪುಸ್ತಕವನ್ನು ಇಟ್ಟಿರುತ್ತಾರೆ. ಅಲ್ಲಿ ಯಾರು ಯಾವಾಗ ಬಂದರು, ಯಾವ ಕೆಲಸಕ್ಕೆ ಹೊರಗೆ ಹೋದರು, ಮತ್ತೆ ಹಿಂತಿರುಗಿದ್ದು ಯಾವಾಗ, ಪಾಳಿ ಮುಗಿಸಿ ಮನೆಗೆ ಹೋಗುವುದು ಯಾವಾಗ, ಅವರು ಮಾಡಿದ ಕೆಲಸವೇನು ಎಂಬಿತ್ಯಾದಿ ಬಗ್ಗೆ ನಮೂದಿಸಬೇಕು.
ಅದನ್ನು ಸಂಬಂಧಪಟ್ಟ ಠಾಣೆಯ ನಿಗದಿಪಡಿಸಿದ ಪೊಲೀಸ್ ಪೇದೆ ಡಿಸಿಪಿ ಮತ್ತು ಎಸಿಪಿ ಕಚೇರಿಗೆ ತಲುಪಿಸುತ್ತಾರೆ. ಅದೇ ರೀತಿ ಮತ್ತೆ ಅವರೇ ಅದನ್ನು ವಾಪಸ್ ತರುತ್ತಾರೆ. ಇದು ಅವರ ನಿತ್ಯದ ಕೆಲಸಗಳಲ್ಲೊಂದು.
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಐಟಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕೆಲವು ಠಾಣೆಗಳಲ್ಲಿ ಆ ದಿನಚರಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಹಿರಿಯ ಅಧಿಕಾರಿಗಳ ಕಚೇರಿಗೆ ಕಳುಹಿಸಿಕೊಡುತ್ತಾರೆ. ಇನ್ನು ಕೆಲವರು ಹಳೆ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ನಗರ ಪ್ರದೇಶದ ಪ್ರತಿ ಠಾಣೆಯಲ್ಲೂ ಸುಮಾರು 80ರಿಂದ 90 ಮಂದಿ ಸಿಬ್ಬಂದಿ ಇರುತ್ತಾರೆ. ಕೆಲವೆಡೆ ಅಗತ್ಯದಷ್ಟು ಸಿಬ್ಬಂದಿ ನಿಯೋಜಿಸಲಾಗಿರುತ್ತದೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

