ಮಾನ್ಸೂನ್ Hair Style
ಈ ಮಾನ್ಸೂನ್ನಲ್ಲಿ ಕೂದಲಿನ ರಕ್ಷಣೆ ಎಷ್ಟು ಮುಖ್ಯವೋ, ಹೇರ್ಸ್ಟೈಲ್ ಕೂಡಾ ಟ್ರೆಂಡಿ ಆಗಿರಬೇಕು. ಹಾಗಂತ ದಿನಾ...

ಮಳೆಗಾಲದಲ್ಲಿ ಯಾವ ಹೇರ್ಸ್ಟೈಲ್ ಉತ್ತಮ ಎಂಬುದರ ಬಗ್ಗೆ ಹುಡುಗಿಯರಲ್ಲಿ ಗೊಂದಲ ಇದ್ದೇ ಇರುತ್ತದೆ. ಈ ಮಾನ್ಸೂನ್ನಲ್ಲಿ ಕೂದಲಿನ ರಕ್ಷಣೆ ಎಷ್ಟು ಮುಖ್ಯವೋ, ಹೇರ್ಸ್ಟೈಲ್ ಕೂಡಾ ಟ್ರೆಂಡಿ ಆಗಿರಬೇಕು. ಹಾಗಂತ ದಿನಾ ಬ್ಯೂಟಿಪಾರ್ಲರ್ಗೆ ಹೋಗಿ ವಿಧ ವಿಧದ ಹೇರ್ಸ್ಟೈಲ್ ಮಾಡಿಸಿಕೊಳ್ಳಬೇಕಾಗಿಲ್ಲ. ನಿಮಗಿಷ್ಟವಾದ, ಸುಲಭವಾಗಿ ಮಾಡಬಲ್ಲ ಕೆಲವೊಂದು ಹೇರ್ಸ್ಟೈಲ್ಸ್ ಇಲ್ಲಿವೆ. ಟ್ರೈ ಮಾಡಿ ನೋಡಿ...
1. ಬನ್ ಮಾದರಿ
ಉದ್ದ ಕೂದಲನ್ನು ತುರುಬು ಕಟ್ಟುವುದು ಹೇಗೆ ಅಂತ ನಿಮಗೆ ಗೊತ್ತೇ ಇದೆ. ಹೀಗೆ ತುರುಬು ಕಟ್ಟಿ, ಮುಂದಿನ ಸ್ವಲ್ಪ ಕೂದಲು ಮುಖಕ್ಕೆ ಬೀಳುವಂತೆ ಇಳಿ ಬಿಡಿ. ಇದು ನಿಮಗೆ ಹೊಸ ಲುಕ್ ನೀಡುವುದು ಮಾತ್ರವಲ್ಲದೆ ಸ್ಟೈಲಿಷ್ ಆಗಿ ಕಾಣುವಂತೆ ಮಾಡುತ್ತದೆ.
3. ಹೈ ಪೋನಿ ಸ್ಟೈಲ್
ರಬ್ಬರ್ ಬ್ಯಾಂಡ್ ಹಾಕಿ ಕುದುರೆಬಾಲದಂತೆ ಹಿಂದೆ ಒಂದು ಜಡೆ ಕಟ್ಟುವುದು ಸುಲಭ ಅಲ್ಲವೇ? ಅದನ್ನು ಇನ್ನೂ ಸ್ಟೈಲಿಷ್ ಆಗಿ ಮಾಡಬೇಕಾದರೆ ಮುಂದೆ ಸ್ವಲ್ಪ ಪಫಿಂಗ್ ಮಾಡಿ. ಪಫಿಂಗ್ ಚೆನ್ನಾಗಿ ಕಾಣಿಸಲು ಹೇರ್ಸ್ಪ್ರೇ ಅಥವಾ ಜೆಲ್ ಕೂಡಾ ಬಳಸಬಹುದು. ಹೈ ಪೋನಿ ಹಾಕಿ ಅದಕ್ಕೆ ಫ್ಯಾಷನೇಬಲ್ ಬ್ಯಾಂಡ್ ಹಾಕಿದರೆ ಟ್ರೆಂಡಿಯಾಗಿ ಕಾಣುತ್ತೆ.
2. ಮೆಸ್ಸಿ ನೋಟ್ಸ್
ನೀಟಾಗಿ ತುರುಬು ಕಟ್ಟೋಕೆ ಬರಲ್ವಾ? ಡೋಂಟ್ ವರಿ... ಹೇಗೆ ಬೇಕೋ ಹಾಗೆ ತುರುಬು ಕಟ್ಟಿ ಬ್ಯಾಂಡ್ ಹಾಕಿಕೊಳ್ಳಿ. ಇದುವೇ ಮೆಸ್ಸಿ ನೋಟ್ ಅಥವಾ ರಫ್ ಬನ್ ಹೇರ್ಸ್ಟೈಲ್.
4. ಸೈಡ್ ಪೋನಿ
ನಿಮ್ಮ ಮುಖಕ್ಕೆ ಒಪ್ಪುವಂತೆ ಎಡ ಅಥವಾ ಬಲಕ್ಕೆ ಸೈಡ್ ಪೋನಿ ಹಾಕಬಹುದು. ಸೈಡ್ ಪೋನಿ ಹಾಕಿ ಕಲರ್ಫುಲ್ ಬ್ಯಾಂಡ್ ಹಾಕಿದರೆ ಸೂಪರ್!
5. ಸೈಡ್ ಫ್ರೆಂಚ್ ಪ್ಲಾಟ್
ಸಾಧಾರಣವಾಗಿ ಕೂದಲನ್ನು ಹಿಂದೆ ಬಾಚಿ ಫ್ರೆಂಚ್ ಪ್ಲಾಟ್ ಸ್ಟೈಲ್ ಮಾಡುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಕೂದಲನ್ನು ಒಂದು ಭಾಗಕ್ಕೆ ಬಾಚಿದ ಮೇಲೆ ಫ್ರೆಂಚ್ ಪ್ಲಾಟ್ ಮಾಡಿ. ಈ ರೀತಿ ಹೆಣೆದಾಗ ಕೂದಲು ಒಪ್ಪವಾಗಿರುವುದು ಮಾತ್ರವಲ್ಲದೆ ಉದ್ದ ಕೂದಲಿನವರಿಗೆ ಇದು ಸ್ಟೈಲಿಷ್ ಲುಕ್ ನೀಡುತ್ತದೆ. ಹೀಗೆ ಹೆಣೆದ ಕೂದಲಿಗೆ ಸ್ಟೈಲಿಷ್ ಆಗಿರುವ ಟೇಪ್ ಬಳಸಿದರೆ ಇನ್ನೂ ಪಸಂದಾಗಿ ಕಾಣುತ್ತದೆ.
6. ಫಂಕಿ ಹೇರ್ಬ್ಯಾಂಡ್
ನಿಮ್ಮ ಕೂದಲು ಚಿಕ್ಕದಾಗಿದ್ದು, ಇದ್ಯಾವ ಸ್ಟೈಲ್ ಮಾಡೋಕೆ ಸಾಧ್ಯವಿಲ್ಲ ಅಂತೀರಾ? ಹಾಗಾದರೆ, ಕೂದಲನ್ನು ಇಳಿ ಬಿಟ್ಟು ಸ್ಟೈಲಿಷ್ ಆಗಿರುವ ಫಂಕಿ ಹೇರ್ಬ್ಯಾಂಡ್ ಬಳಸಿ. ಕಲರ್ ಕಲರ್ ಹೇರ್ ಬೋ ಬಳಸಿದರೆ ನೀವು ಇನ್ನಷ್ಟು ಯಂಗ್ ಆ್ಯಂಡ್ ಸ್ಟೈಲಿಷ್ ಆಗಿ ಕಾಣುತ್ತೀರಿ.
- ಸಾರಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


